ಕನ್ನಡದ ಸೃಜನಶೀಲ ಬರಹಗಾರ, ಪತ್ರಕರ್ತ ಪಿ. ಲಂಕೇಶ್ ಅವರ ಆತ್ಮಕಥನ- ಹುಳಿಮಾವಿನ ಮರ. ಈ ಕೃತಿಯನ್ನು 1997ರಲ್ಲಿ ಪತ್ರಿಕೆ ಪ್ರಕಾಶನ ಪ್ರಕಟಿಸಿತ್ತು ಆನಂತರ ಲಂಕೇಶ್ ಪ್ರಕಾಶನದಿಂದ 2014ರಲ್ಲಿ ಮತ್ತೆ ಮರುಮುದ್ರಣಗೊಂಡಿದೆ. ಕವಿತೆ, ಕತೆ, ಕಾದಂಬರಿ, ನಾಟಕ, ಪತ್ರಿಕೋದ್ಯಮ ಎಲ್ಲವುಗಳಲ್ಲಿ ಹೊಸತನವನ್ನು ಕಟ್ಟಿಕೊಟ್ಟ ಪ್ರಖ್ಯಾತ ಬರಹಗಾರ ಲಂಕೇಶ್ ಅವರ ಬದುಕಿನ ಹಲವು ಮಜಲುಗಳನ್ನು ಅವರು ಬದುಕಿದಂತೆಯೇ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಆತ್ಮಕತೆಗಳಲ್ಲಿಯೇ ಅತ್ಯಂತ ವಿಭಿನ್ನವಾದ ಹುಳಿಮಾವಿನ ಮರ, ಲಂಕೇಶ್ ಅವರ ಸೃಜನಶೀಲ ಬದುಕಿನ ಕನ್ನಡಿಯಂತಿದೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE