ನನ್ನ ರಸಯಾತ್ರೆ

Author : ಮಲ್ಲಿಕಾರ್ಜುನ ಮನ್ಸೂರ

Pages 120

₹ 75.00

Buy Now


Year of Publication: 2014
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲಕ್ಷಾಂತರ ಭಾರತೀಯರನ್ನು ತಮ್ಮ ಸಂಗೀತದಿಂದ ಮುಟ್ಟಿರುವ ಮಲ್ಲಿಕಾರ್ಜುನ ಮನಸೂರ್ ಭಾರತದ ಅತ್ಯುತ್ತಮ ಸಂಗೀತಗಾರರಲ್ಲಿ ಒಬ್ಬರು. ಸಂಗೀತರತ್ನ, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಪ್ರಶಸ್ತಿಗಳನ್ನು ಗಳಿಸಿದವರು. ಕರ್ನಾಟಕ ವಿಧಾನಪರಿಷತ್ತಿನ ನಾಮಕರಣ ಸದಸ್ಯರು. ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದವರು. ಇಂದು ಇಂಥ ಗೌರವಾನ್ವಿತ ಸ್ಥಿತಿಗೆ ಏರಿರುವ ಮನಸೂರ್ ಬಾಲ್ಯದಲ್ಲಿ ತುಂಬ ಬಡತನವನ್ನೂ, ಇತರ ಕಷ್ಟಗಳನ್ನೂ ಅನುಭವಿಸಿದವರು. ಉತ್ತರ ಕರ್ನಾಟಕದ ಸಾಮಾನ್ಯ ಹುಡುಗನೊಬ್ಬ ಇಷ್ಟೆಲ್ಲ ದೊಡ್ಡದಾಗಿ ಬೆಳೆದದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳ ಮುಂದೆ ಬರುತ್ತದೆ. ಮನಸೂರರ ಆತ್ಮಚರಿತ್ರೆ 'ನನ್ನ ರಸಯಾತ್ರೆ' ಇಂಥ ಪ್ರಶ್ನೆಗಳನ್ನು ಕೆಲಮಟ್ಟಿಗೆ ಉತ್ತರಿಸುತ್ತದೆ. ಆದರೆ ಅದೇ ಈ ಆತ್ಮಕಥನದ ಪ್ರಧಾನ ಉದ್ದೇಶವಲ್ಲ. ಯಾವುದೇ ಆತ್ಮ ಚರಿತ್ರೆ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಹಿಂದಿರುಗಿ ನೋಡಿಕೊಳ್ಳುವ, ತನ್ನ ಹೆಜ್ಜೆ ಗುರುತುಗಳನ್ನು ಗುರುತಿಸಿಕೊಳುವ, ಒಂದು ರೀತಿಯ ಆತ್ಮ ವಿಮರ್ಶೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಆ ವ್ಯಕ್ತಿಯ ಸೋಲು ಗೆಲುವುಗಳು ಕೇವಲ ಅಂಕಿ ಅಂಶಗಳಾಗದೆ ವ್ಯಕ್ತಿತ್ವವನ್ನು ರೂಪಿಸಿದ ಅಂಶಗಳೇ ಆಗಿರುತ್ತವೆ. ಮನಸೂರರ 'ನನ್ನ ರಸಯಾತ್ರೆ' ಕೂಡ ಈ ತರದ ಬರವಣಿಗೆ.

About the Author

ಮಲ್ಲಿಕಾರ್ಜುನ ಮನ್ಸೂರ
(31 December 1911 - 12 September 1992)

ಖ್ಯಾತ ಗಾಯಕ ಮಲ್ಲಿಕಾರ್ಜುನ ಮನಸೂರ ಹಿಂದುಸ್ಥಾನಿ ಗಾಯಕರಲ್ಲಿ ಪ್ರಮುಖರು. ಆರು ದಶಕಗಳ ಕಾಲ ಸಂಗೀತಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮನ್ಸೂರ ಅವರನ್ನು ‘ಫಕೀರ ಆಫ್‌ ಖಯ್ಯಲ್‌’ ಎಂದು ಗುರುತಿಸಲಾಗುತ್ತಿತ್ತು. ಮಲ್ಲಿಕಾರ್ಜುನ ಅವರು ಧಾರವಾಡ ಸಮೀಪದ ‘ಮನಸೂರ’ ಎಂಬ ಗ್ರಾಮದಲ್ಲಿ 1911ರ ಡಿಸೆಂಬರ್ 31 ರಂದು ಜನಿಸಿದರು. ತಂದೆ ಭೀಮರಾಯಪ್ಪ. ತಾಯಿ ನೀಲಮ್ಮ. ಬಾಲ್ಯದ ದಿನಗಳಲ್ಲಿಯೇ ಮಲ್ಲಿಕಾರ್ಜುನ ತನ್ನ ಅಣ್ಣ ಬಸವರಾಜ ಮನ್ಸೂರ ಅವರೊಂದಿಗೆ ಶಾಲೆಗೆ ವಿದಾಯ ಹೇಳಿ ವಾಮನರಾವ್‌ ಮಾಸ್ತರ ನಾಟಕ ಕಂಪೆನಿ ಸೇರಿದರು. ತಮ್ಮ ಮಧುರ ಕಂಠದಿಂದ ಗ್ವಾಲಿಯರ್ ಘರಾಣೆಯ ಪಂ. ನೀಲಕಂಠ ಬುವಾ ಅವರ ...

READ MORE

Awards & Recognitions

Related Books