ಕುಟುಂಬ, ಸ್ನೇಹಿತರು ಮತ್ತು ದೇಶ

Author : ಜಿ. ಎಸ್. ನಾಗೇಂದ್ರನ್

Pages 256

₹ 200.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ವಿಯೆಟ್ನಾಂ ಕ್ರಾಂತಿಯ ಕಿಚ್ಚು ಮತ್ತು ಕುಸುಮ ಎಂದೇ ಪ್ರಸಿದ್ದರಾದರು ನುಯೆನ್ ಥೀ ಬಿನ್. ಆಕೆ ಸಮಾಜದ ಕೆಳ ಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಆಕೆಯದು ಸಾಹಸಮಯ ಬದುಕು. ಅವರ ಹೋರಾಟಗಳ ಹಲವು ಕಥನಗಳು ಇಲ್ಲಿ ದಾಖಲಾಗಿವೆ. ಬಿನ್ ಅವರನ್ನು ಹಲವು ಬಾರಿ ಸೆರೆ ಹಿಡಿಯಲಾಯಿತು. ಜೈಲುವಾಸ ಅನುಭವಿಸಿ, ಚಿತ್ರಹಿಂಸೆಗೂ ಒಳಗಾದರು, ಈ ದಿಟ್ಟ ಹೋರಾಟಗಾರ್ತಿ ಶರಣಾಗಲಿಲ್ಲ. ತನ್ನ ರಾಷ್ಟ್ರ ವಿಮೋಚನೆಗೊಂಡ ಅನಂತರ ಬಿನ್ ವಿಯೆಟ್ನಾಮ್‌ನ ವಿದೇಶಾಂಗ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತದನಂತರ ರಾಷ್ಟ್ರದ ಉಪಾಧ್ಯಕ್ಷರೂ ಆದರು. ಈಕೆ ಇಡೀ ವಿಯೆಟ್ನಾಂ ಮಹಿಳೆಯರನ್ನು ಈ ಕೃತಿಯಲ್ಲಿ ಪ್ರತಿನಿಧಿಸುತ್ತಾರೆ. ಇಲ್ಲಿ ಮೂರು ಹಂತದ ಆಕೆಯ ಬದುಕನ್ನು ನೋಡಬಹುದು. ಒಂದು ಬಾಲ್ಯ ಮತ್ತು ಹದಿಹರೆಯ. ಆಕೆಯನ್ನು ಹೊರಾಟಕ್ಕೆ ಸಿದ್ದವಾಗಿಸಿದ ವಿಯೆಟ್ನಾಂನ ಸ್ಥಿತಿಗತಿಗಳು ಇಲ್ಲಿ ದಾಖಲಾಗಿವೆ. ಹಾಗೆಯೇ ಆಕೆಯ ಬಾಲ್ಯ ಮತ್ತು ಹದಿಹರಯ ರೂಪುಗೊಂಡ ಬಗೆಯನ್ನೂ ಹೇಳಲಾಗಿದೆ. ತದನಂತರ ಆಕೆಯ ಹೋರಾಟದ ಬದುಕನ್ನು ಹೇಳುತ್ತದೆ. ಈ ಸಂದರ್ಭದಲ್ಲಿ ಕುಟುಂಬದೊಳಗಿನ ಬಿಕ್ಕಟ್ಟುಗಳನ್ನು, ಹೋರಾಟದ ಸಂದರ್ಭದಲ್ಲಿ ಮಹಿಳೆ ಎದುರಿಸಬಹುದಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಇದಾದನಂತರ ವಿಯೆಟ್ನಾಂ ಆಡಳಿತದ ಭಾಗೀದಾರಿಯಾಗಿ ನಿಭಾಯಿಸಿದ ರೀತಿಯನ್ನು ವಿವರಿಸುತ್ತಾರೆ. ಶಿಕ್ಷಣ ಸಚಿವೆಯಾಗಿ, ಉಪಾಧ್ಯಕ್ಷೆಯಾಗಿ ಆಕೆ ಎದುರಿಸಿದ ಸವಾಲು, ವಿಯೆಟ್ನಾಂನ ಮರು ನಿರ್ಮಾಣದಲ್ಲಿ ಆಕೆಯ ಪಾತ್ರವನ್ನು ಈ ಕೃತಿಯು ವಿವರಿಸುತ್ತದೆ.

Related Books