ಲೇಖಕಿ ಅಕ್ಷತಾ ಕೆ ಅವರ ಸಂಪಾದಿಸಿರುವ ಕರತಿ ’ಕಾಡ ತೊರೆಯ ಜಾಡು’. ಈ ಪುಸ್ತಕವು ರೈತ ಮುಖಂಡರಾದ ಕಡಿದಾಳು ಶಾಮಣ್ಣ ಅವರ ಜೀವನ ಚಿತ್ರಣವನ್ನು ಪರಿಚಯಿಸುವಂತದ್ದು.
ಅಪಾರವಾದ ತಾಳ್ಮೆ, ಅಪ್ಪಟ ಪ್ರಾಮಾಣಿಕತೆ, ಆರೋಗ್ಯಕರವಾದ ನಿಲುವು, ಎಂಥ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಮಾಧಾನಿಸುವ ಅವರ ಹಾಸ್ಯಪ್ರವೃತ್ತಿಯನ್ನು ಹೊಂದಿರುವ ಕಡಿದಾಳು ಶಾಮಣ್ಣ ಅವರ ವ್ಯಕ್ತಿತ್ವವನ್ನು ಕುರಿತಾದ ಈ ಪುಸ್ತಕ ಓದುಗರ ಕೈ ಸೇರಿದೆ.
ಕಡಿದಾಳು ಶಾಮಣ್ಣರ ಬದುಕು, ಶೈಲಿ, ವ್ಯಕ್ತಿತ್ವ ಚಿತ್ರಣ, ಕ್ಯಾಮೆರಾ ನಡುವಿನ ಅವರ ಒಡನಾಟ, ಸಾಹಿತ್ಯದ ನಂಟು, ಹೋರಾಟದ ಬದುಕು 1980 ರ ದಶಕದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದಾಗ ಪ್ರಮುಖರಾಗಿದ್ದ ಶಾಮಣ್ಣರ ದಿನಗಳು, ಇನ್ನೂ ಮುಂತಾದವುಗಳ ಬಗ್ಗೆ ಕುತೂಹಲ ಹುಟ್ಟಿಸುವ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕಿ ಅಕ್ಷತಾ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.