’ಶಿಕ್ಷಣ ಮತ್ತು ನಾನು” ಕೃತಿಯು ಡಾ. ಕೆ. ಶಿವರಾಮ ಕಾರಂತ ಅವರು ರಚಿಸಿದ ಕೃತಿ. 79ನೇ ವಯಸ್ಸಿನಲ್ಲಿಯೂ ಅವರ ಬರವಣಿಗೆ ನಿರಂತರವಾಗಿದೆ. ತಮ್ಮ ಈ ಮುಂದಿನ ಬರವಣಿಗೆಗೆಲ್ಲ ’ಸ್ಮೃತಿ ಪಟಲದಿಂದ’ ಎಂಬ ಸರಣಿಯೊಂದಿಗೆ ಆರಂಭಿಸುತ್ತಾರೆ. ಈ ಸರಣಿಯಲ್ಲಿ ಶಿಕ್ಷಣ ಮತ್ತು ನಾನು ಕೃತಿ ಸೇರ್ಪಡೆಯಾಗಿದೆ. ಕಾರಂತರ ವಿಶಾಲ ಜೀವನಾನುಭವಗಳು, ಆಳವಾದ ಗಣಿಯಂತಿರುವ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿವೆ. ’ಹುಚ್ಚು ಮನಸ್ಸಿನ ಹತ್ತು ಮುಖಗಳು ’ ಕೃತಿ ಮಾತ್ರ ಕಾರಂತರ ಆತ್ಮಕಥೆಯಲ್ಲ; ಬದಲಿಗೆ, ’ ಸ್ಮೃತಿಪಟಲದಿಂದ ’ ಸರಣಿ ಮಾಲೆಯಡಿ ಬರುವ ಎಲ್ಲ ಕೃತಿಗಳು ಒಂದು ಅರ್ಥದಲ್ಲಿ ಅವರ ಆತ್ಮಕಥೆಯೇ ಆಗಿದೆ. ಈ ಹಿನ್ನೆಲೆಯಲ್ಲಿ, ಶಿಕ್ಷಣ ಮತ್ತು ನಾನು ಕೃತಿಯು ಹೆಚ್ಚು ಮಹತ್ವ ಪಡೆಯುತ್ತದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE