ನಾಡಿನ ಸಾಕ್ಷಿಪ್ರಜ್ಞೆಯಂತೆ ಇದ್ದವರು ವಿಚಾರವಾದಿ, ಶಿಕ್ಷಣತಜ್ಞ, ಗಾಂಧಿವಾದಿ ಎಚ್. ನರಸಿಂಹಯ್ಯ. 'ಹೋರಾಟದ ಹಾದಿ' ಅವರ ಆತ್ಮಕತೆ. ಆದರೆ ಇದು ಕೇವಲ ಆತ್ಮಕತೆಯಲ್ಲ. ಸ್ವಾತಂತ್ಯ್ರ ಚಳವಳಿಯ ಕಥನ, ಹಲವು ಶಿಕ್ಷಣಸಂಸ್ಥೆಗಳು ಕಣ್ಣುಬಿಟ್ಟ ಕತೆ, ಸಾಮಾನ್ಯ ಹುಡುಗನೊಬ್ಬ ಅಸಾಮಾನ್ಯನಾದ ಯಶೋಗಾಥೆ.
ಶಿಸ್ತು ಮತ್ತು ಸರಳತೆಗೆ ಎಚ್ಚೆನ್ ಅವರು ಮತ್ತೊಂದು ಹೆಸರು. ಕರ್ನಾಟಕದ ಮೂಡಲಸೀಮೆಯ ಹುಡುಗನೊಬ್ಬ ಅಮೆರಿಕ್ಕೆ ಹೋದರೂ ಉಪ್ಪಿಟ್ಟು ತಿನ್ನುವ, ಗಾಂಧಿಟೊಪ್ಪಿಯನ್ನೇ ತೊಡುವ, ಫಿಸಿಕ್ಸ್‌ನಲ್ಲಿ ಫಿಲಾಸಫಿ ಕಾಣುವ ಪುಸ್ತಕ ತರುಣ- ತರುಣಿಯರು ಓದಲೇಬೇಕಾದ ಕೃತಿ.
ಎಚ್.ನರಸಿಂಹಯ್ಯನವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಹಿಂದುಳಿದ ಬಡಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿಯೇ ಮುಗಿಸಿದರು. 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ (ಪ್ರಥಮ) ದರ್ಜೆಯಲ್ಲಿ ಉತ್ತೀರ್ಣರಾದರು. 1946ರಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಹನ್ನೆರಡು ವರ್ಷಗಳು ಪ್ರಿನ್ಸಿಪಾಲರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ, ಅವರ ...
READ MORE