ಪ್ರವಾಸಿಯ ಒಡಲುವಿಶ್ವನಾಥ್ ಕಾರ್ನಾಡ್ ಆತ್ಮಕಥನವಾಗಿದೆ. ಈ ಗ್ರಂಥದಲ್ಲಿ ಮುಂಬಯಿ ಹೇಗೆ ತನ್ನ ಕಷ್ಷ ನಷ್ಟಗಳನ್ನು ತನ್ನೊಡಲಿಗೆ ಹಾಕಿಕೊಂಡು ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಮುಂಬಯಿಗೆ ಬರದಿದ್ದರೆ ನಾನು ಏನೂ ಅಗುತ್ತಿದ್ದೆನೊ ಏನೂ ಆಗುತ್ತಿರಲಿಲ್ಕವೊ ಅದು ಅನಿಶ್ಚಿತ ಅನೂಹ್ಯ. ಬಾಲ್ಯಕಾಂಡ, ಯೌವನ ಪರ್ವ, ಉದ್ಯೋಗ ಪರ್ವ , ವಿವಾಹ, ಇವೆಲ್ಲವುಗಳಿಗಿಂತ ಅವರು ಸಾಹಿತಿಯಾಗಿ ರೂಪಗೊಂಡ ಕಥೆ ಅತ್ಯಂತ ರೋಚಕವಾಗಿದೆ. ಬಡ ಕೂಲಿಕಾರ ತಂದೆ, ಅನಕ್ಷರಸ್ಥ ತಾಯಿ ಇವರ ಒಡಲಲ್ಲಿ ಹುಟ್ಟಿದ ಶಿವನೆಂಬ ಪೋರನಿಗೆ ಬಾಲ್ಯದಿಂದಲೂ ಬಡತನ ಕಾಡುತ್ತಿದ್ದರೂ ಅಪ್ಪ ಕೂಲಿ ಕೆಲಸ ಮಾಡುತ್ತಿದ್ದರೂ ಸ್ವಾಭಿಮಾನಿಯಾಗಿದ್ದ. ಬಡತನದ ಬೇಗೆಯಲ್ಲಿ ನರಳುತ್ತಿದ್ದ ಬಾಲಕ ಶಿವು ಬೇರೊಬ್ಬರ ಮನೆಗೆ ಭೂರಿ ಭೋಜನಕ್ಕೆ ಹೋದನೆಂದು ಅಲ್ಲಿಗೆ ಹೋಗಿ ಊಟದ ಸ್ಥಳದಿಂದ ಎಳೆದೊಯ್ದು ಕೋಲಿನಿಂದ ಹೊಡೆದ ಬಡಿತಕ್ಕೆ ಬಡ ಮಗು ತಿಂದದ್ದೆಲ್ಲ ವಾಂತಿ ಮಾಡಿತ್ತು.
ತುಳುನಾಡಿನ ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಹುಟ್ಟಿದ ಡಾ. ಕೆ. ವಿಶ್ವನಾಥ ಕಾರ್ನಾಡರು (1940) ಓದಿಗೆ ಮತ್ತು ಉದ್ಯೋಗಕ್ಕಾಗಿ ಮುಂಬೈ ನಗರ ಸೇರಿದರು. ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ ಮೂರು ವಿಷಯಗಳಲ್ಲಿ ಎಂ.ಎ. ಮಾಡಿ, ಎಲ್. ಎಲ್.ಬಿ, ಬಿ.ಎಡ್.ಪದವಿ ಹಾಗೂ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಮುಂಬೈಯ ಮಹರ್ಷಿ ದಯಾನಂದ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ, ಎಂ.ಫಿಲ್ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. 'ತುಳುವರ ಮುಂಬಯಿ ವಲಸೆ-ಸಾಂಸ್ಕೃತಿಕ ಅಧ್ಯಯನ' ಎಂಬ ಸಂಶೋಧನಾ ಕೃತಿಯೂ ಸೇರಿದಂತೆ ಒಂಬತ್ತು ಕಥಾ ...
READ MORE