ತ.ರಾ.ಸು ಹಾಗೂ ಪತ್ನಿ ಅಂಬುಜಾ ತ.ರಾ.ಸು ಅವರು ಬರೆದ ತಮ್ಮ ಜೀವನ ಚರಿತ್ರೆಯೇ ಈ ಕೃತಿ. 1999 ರಲ್ಲಿ ಮೊದಲ ಮುದ್ರಣ ಕಂಡಿತ್ತು. 1984ರ ಏ. 10 ರಂದು ತ.ರಾ.ಸು ತೀರಿಕೊಂಡರು. ಅದಕ್ಕಿಂತ ಮುಂಚೆ ಅಂದರೆ 1981ರಲ್ಲಿ ದಾವಣಗೆರೆಯಿಂದ ಪ್ರಕಟವಾಗುತ್ತಿದ್ದ ”ಸೌರಭ’ ವಾರಪತ್ರಿಕೆಯಲ್ಲಿ ಕೆಲವು ಪುಟಗಳಷ್ಟು ಆತ್ಮಚರಿತ್ರೆ ಪ್ರಕಟವಾಗಿತ್ತು. ನಂತರ ಈ ಪತ್ರಿಕೆ ನಿಂತು ಹೋಯಿತು. ತರಂಗ ವಾರಪತ್ರಿಕೆ ಸಂಪಾದಕ ಸಂತೋಷಕುಮಾರ ಗುಲ್ವಾಡಿ ಅವರು ತಮಗೆ ಬರೆದುಕೊಡಲು ಕೇಳಿದಾಗ ’ಪೂರ್ಣಗೊಳಿಸಿ ಕೊಡುತ್ತೇನೆ' ಎಂದರು. ಆದರೆ, ವಿಧಿ ಅವರನ್ನು ಪೂರ್ಣಗೊಳಿಸಲು ಬಿಡಲಿಲ್ಲ. ಅದನ್ನು ಪೂರ್ಣಗೊಳಿಸುವ ಹೊಣೆ ತಮ್ಮ ಮೇಲೆ ಬಿದ್ದು, ಹೇಗೋ ಪೂರ್ಣಗೊಳಿಸಿದ್ದರ ಫಲವೇ ಈ ಕೃತಿ ”ಹಿಂತಿರುಗಿ ನೋಡಿದಾಗ’ ಎಂದು ಪತ್ನಿ ಅಂಬುಜ ತ.ರಾ.ಸು ಅವರು ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE