ಚಿಗುರು ನೆನಪು

Pages 98

₹ 8.00




Year of Publication: 1983
Published by: ವಿಶ್ವಭಾರತಿ ಪ್ರಕಾಶನ
Address: ಸ್ಟೇಷನ್ ರಸ್ತೆ, ಮಡಗಾಂವ್ ಗೋವಾ

Synopsys

'ಚಿಗುರು ನೆನಪು’ ಕೃತಿಯು ನಟರಾಜ ಬಸವರಾಜ ಮನ್ಸೂರರ ಆತ್ಮಕತೆ ಕೃತಿಯಾಗಿದ್ದು, ಶಾ. ಮಂ. ಕೃಷ್ಣರಾಯರು ಕೃತಿಯ ನಿರೂಪಣೆ ಮಾಡಿದ್ದಾರೆ. ಕರ್ನಾಟಕ ರಂಗಭೂಮಿ-ಸಂಗೀತ ಪ್ರಪಂಚಕ್ಕೆ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಟಶೇಖರ ಬಸವರಾಜ ಮನ್ಸೂರ್ ಅವರ ಸಾಹಸದ ಬದುಕಿನ ಸತ್ಯ ಚಿತ್ರಣವನ್ನು ಈ ಆತ್ಮಕಥೆ ಮುಂದಿಡುತ್ತದೆ. ಚಲನ ಚಿತ್ರರಂಗದ ಆರಂಭದ ದಿನಗಳಲ್ಲಿ ಹಿಂದೀ ಕನ್ನಡ ಸಿನಿಮಾಗಳಲ್ಲಿ ನಟಿಸಿ, ಹಾಡಿ, ಸಂಗೀತ, ನಿರ್ದೇಶಕರಾಗಿ, ನಟರಾಗಿ ಹೆಸರಾದವರು. ತಮ್ಮ ಐವತ್ತನೆಯ ವಯಸ್ಸಿನಲ್ಲಿಯೂ ಗಂಧರ್ವ ಮಹಾವಿದ್ಯಾಲಯದ ಶಿಕ್ಷಣ ಪಡೆದು ಸಂಗೀತ ಶಿಕ್ಷಕರಾಗಿ ದುಡಿದರು. ಇದು ಬಸವರಾಜ ಮಾನ್ಸೂರರ ಆತ್ಮಕತೆಯಾದರೂ ಇಲ್ಲಿ ಪಂಚಪಾಂಡವರಂತೆ ಬಾಳಿದ ಮನಸೂರ್ ಮನೆತನದ ಕತೆ ನಿರೂಪಿತವಾಗಿದೆ. ಈ ಮನೆತದಲ್ಲಿಯೇ ಹುಟ್ಟಿದ ಡಾ. ಮಲ್ಲಿಕಾರ್ಜುನ ಮನ್ಸೂರ್ ನಮ್ಮ ನಾಡಿನ ಹೆಮ್ಮೆಯ ಪುತ್ರ. ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅತ್ಯಂತ ಉಚ್ಚ ಕಾಳಿದಾಸ ಪ್ರಶಸ್ತಿ ಮೊಟ್ಟ ಮೊದಲ ಬಾರಿ ಪಡೆದು ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ ಎನ್ನುತ್ತದೆ ಈ ಕೃತಿ.

Related Books