ಲೇಖಕ, ಕೇಂದ್ರ ಮಾಜಿ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ-ಸಾಲಮೇಳದ ಸಂಗ್ರಾಮ. ಸುಮಾರು 17 ವರ್ಷ ಕಾಲ ಮಂಗಳೂರಿನ ಕೋರ್ಟಿನಲ್ಲಿ ವಕೀಲಿ ಪ್ರಾಕ್ಟೀಸ್ ಮಾಡಿ, ತದನಂತರ ರಾಜಕೀಯ ಪ್ರವೇಶಿಸಿ, ವಿವಿಧ ಹಂತದ ಸಾಧನೆಗಳ ಮೆಟ್ಟಿಲುಗಳನ್ನು ಏರುತ್ತಾ, ಕೇಂದ್ರ ಸಚಿವ ಸಂಪುಟದ ಸಚಿವರಾದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) 2003ರಲ್ಲಿ ಅಧ್ಯಕ್ಷರಾಗಿದ್ದರು. ಬಡವರ ಪರವಾಗಿ ಹಲವಾರು ಹೋರಾಟ ಮಾಡಿದವರು. ಬಡವರಿಗೆ ಸಾಲಮೇಳ ನಡೆಸಿ, ಅತ್ಯಂತ ಸರಳವಾಗಿ ಬ್ಯಾಂಕಿನಿಂದ ಸಾಲ ಸಿಗುವಂತೆ ವ್ಯವಸ್ಥೆ ಮಾಡಿದ್ದು, ಈ ಕಾರಣಕ್ಕಾಗೇ ಇವರನ್ನು ‘ಸಾಲಮೇಳದ ಪೂಜಾರಿ’ ಎಂದೇ ಜನಜನಿತ. ನಿಷ್ಠುರ ವ್ಯಕ್ತಿತ್ವದ ಜನಾರ್ದನ ಪೂಜಾರಿ ಅವರು ತಮ್ಮ ರಾಜಕೀಯ ಅನುಭವದ ಮೂಲಕ ಹಾಗೂ ಬಡವರ ಪರವಾದ ಕಳಕಳಿಯ ಮನೋಭಾವದ ಮೂಲಕ ಕಂಡುಕೊಂಡ ವಾಸ್ತವಗಳನ್ನು ದಾಖಲಿಸಿದ ಕೃತಿ ಇದು. .
ಲೇಖಕ ಬಿ. ಜನಾರ್ದನ ಪೂಜಾರಿ ಅವರು ಕೇಂದ್ರ ಮಾಜಿ ಸಚಿವರು. ವಾಗ್ಮಿಗಳು. ಮೂಲತಃ ಮಂಗಳೂರಿನವರು. ಕಾನೂನು ಪದವೀಧರರು. 1960-1979ರವರೆಗೆ ಅವರು ಮಂಗಳೂರಿನ ಕೋರ್ಟಿನಲ್ಲಿ ಪ್ರಾಕ್ಟೀಸ್ ಮಾಡಿದ್ದು, ತದನಂತರ ಅವರು ರಾಜಕಾರಣದಲ್ಲಿ ಸಕ್ರಿಯರಾದರು. ತುಳು ನಾಡು ವ್ಯಾಪ್ತಿಯಲ್ಲಿ ಹಲವು ದೇವಾಲಯಗಳ ನಿರ್ಮಾಣ ಹಾಗೂ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಇವರ ಪಾತ್ರ ದೊಡ್ಡದು. 2003ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕೃತಿಗಳು: ಸಾಲಮೇಳದ ಸಂಗ್ರಾಮ (ಆತ್ಮಕಥೆ) ...
READ MORE