ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಯಾಗಿ ನಿವೃತ್ತರಾದ ಎಸ್.ಬಿ. ಶಾಪೇಟಿ ಅವರು ತಮ್ಮ 83ನೇ ವಯಸ್ಸಿನಲ್ಲಿ ಬರೆದ ಆತ್ಮಕಥನ-‘ಮೌನ ಮಾತಾಡಿತು. ಹೊಂಬೆಳಕಿನ ಕವಿ ಚನ್ನವೀರ ಕಣವಿ ಅವರು ಈ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘83ನೇ ವಯಸ್ಸಿಗೆ ಆತ್ಮಕಥನ ಬರೆಯುವುದು ಸುಲಭವಲ್ಲ. ಉತ್ತಮ, ಕರ್ತವ್ಯ ದಕ್ಷ, ಹಾಗೂ ಪ್ರಾಮಾಣಿಕ ಆಡಳಿತಾರರೆಂದೇ ಪ್ರಸಿದ್ಧಿ ಪಡೆದಿದ್ದ ಎಸ್.ಬಿ. ಶಾಪೇಟಿ ಅವರ ಆತ್ಮಕಥನ ‘ಮೌನ ಮಾತಾಡಿ’ದ್ದೂ ಸಾರ್ಥಕ ಎಂದು ಪ್ರಶಂಸಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಸಿದ್ದಪ್ಪ ಶಾಪೇಟಿ (ಎಸ್.ಬಿ.ಶಾಪೇಟಿ) ಅವರು ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಉಚ್ಛ ಶಿಕ್ಷಣ ಪಡೆದು ಅಲ್ಲಿಯೇ ಅಧ್ಯಾಪಕರಾದರು. ಇವರ ಕರ್ತವ್ಯ ದಕ್ಷತೆಯನ್ನು ಕಂಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ, ಇವರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಮಂತ್ರಿಸಿದಾಗ ಶಾಪೇಟಿ ಅವರು ಧಾರವಾಡಕ್ಕೆ ಬಂದು ನೆಲೆಸಬೇಕಾಯಿತು. ನಂತರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಯಾಗಿ ನೇಮಕ ಗೊಂಡು, ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಕಾರಣರಾದರು.ಅವರ ಕರ್ತವ್ಯನಿಷ್ಠೆ ಹಾಗೂ ಶಿಸ್ತು ಬದ್ಧ ಜೀವನವನ್ನುತಮ್ಮದೇ ಆದ ಆತ್ಮಕಥೆ-‘ಮೌನ ಮಾತನಾಡಿತು’ ಕೃತಿಯಲ್ಲಿ ಉಲ್ಲೇಖಿಸಿದ್ದು, ಇತರರಿಗೂ ಮಾದರಿಯಾಗಿದೆ. ಬಾಲ್ಯದ ನೆನಪುಗಳು, ಕೊಲ್ಹಾಪುರ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ಹಾಗೂ ಸ್ನೇಹಸುಧೆ ಹೀಗೆ ...
READ MORE