ಪರಿಚಿತರೆಲ್ಲರ ಪಾಲಿಗೆ ಅಮ್ಮನಾಗಿರುವ ಡಾ.ವಿಜಯಾ ಅವರು ಸಾಗಿಬಂದ ಬದುಕಿನ ಪುಟಗಳೇ ಕುದಿಎಸರು. ಹೆಣ್ಣು ಎಂದರೇನೆ ಅಸಡ್ಡೆ, ಶೋಷಣೆಗೆ ಒಳಗಾಗುವವಳು, ಮುಂತಾದ ಎಲ್ಲಾ ಕಷ್ಟಗಳನ್ನು ಅನುಭವಿಸಿರುವ ವಿಜಯಮ್ಮ ಅವರು, ಆ ನೋವನ್ನೆಲ್ಲಾ ಎದುರಿಸಿ ಗಟ್ಟಿಯಾಗಿದ್ದೇಗೆ ಎಂಬುದನ್ನು ಈ ಆತ್ಮಕತೆ ವಿವರಿಸುತ್ತದೆ. ಪುಸ್ತಕದ ಭಾಷೆ ಸರಳವಾಗಿದೆ ಎನ್ನುವುದಕ್ಕಿಂತ ಅವರನುಭವಿಸಿದ ಯಾತನೆ, ಅಸ್ಥಿತ್ವಕ್ಕಾಗಿ ಹೋರಾಡಿದ ಬಗೆ ಇವೆಲ್ಲವೂ ನಮ್ಮೊಳಗಿಳಿಯುವುದರಿಂದ ಭಾಷೆಯ ಬಗ್ಗೆ ಸೊಲ್ಲೆತ್ತಲಾರೆವು.
ಅಸ್ಪೃಶ್ಯ ಜಗತ್ತಿನ ಪುರುಷರೆಲ್ಲರೂ ಓದಲೇ ಬೇಕಾದ ಕೃತಿ ಕುದಿಎಸರು ಎನ್ನುತ್ತಾರೆ ಬರಹಗಾರ ಲಕ್ಷ್ಮೀಪತಿ ಕೋಲಾರ ಅವರು. ಜೀವನದ ಬಗ್ಗೆ ಜಿಗುಪ್ಸೆ ಹುಟ್ಟಿದೆ ಎನ್ನುವವರು, ಮಹಿಳೆಯರಾಗಿ ಹುಟ್ಟುವುದೇ ತಪ್ಪು ಎಂದು ಭಾವಿಸುವವರು, ಹಣೆ ಬರಹ, ಪೂರ್ವ ಜನ್ಮದ ಕರ್ಮ ಹೀಗೆ ಯಾವುದೋ ಒಂದಕ್ಕೆ ಜೋತುಬಿದ್ದು, ಕಷ್ಟ-ಕಾರ್ಪಣ್ಯದಲ್ಲಿಯೇ ಬದುಕು ನಡೆಸುತ್ತಿರುವವರೆಲ್ಲರೂ ಓದಬೇಕಾದ ಕೃತಿ ಇದಾಗಿದೆ. ಕುಟುಂಬದಲ್ಲಿ ತಂದೆಯ ಶೋಷಣೆ, ಗಂಡನಿಂದ ಲೈಂಗಿಕ ಶೋಷಣೆ ಎಲ್ಲವನ್ನು ಅನುಭವಿಸಿ, ಇದರಿಂದ ಹೊರಬಂದು ಹೊಸ ಜೀವನವನ್ನು ಕಟ್ಟಿಕೊಂಡ ವಿಜಯಮ್ಮ ಅವರ ಜೀವನ ಸ್ಫೂರ್ತಿ ನೀಡುವಂತಹದ್ದಾಗಿದೆ.
ಲೇಖಕಿ ಹಾಗೂ ಪತ್ರಕರ್ತೆ ವಿಜಯಾ ಅವರ ಆತ್ಮ ಕಥೆ ಕುದಿ ಎಸರು ಕುರಿತು ಸಂದರ್ಶನ
©2025 Book Brahma Private Limited.