ಯಕ್ಷಗಾನವನ್ನು ವಿಶ್ವಕ್ಕೆ ಪರಿಚಯಿಸಿದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ಆತ್ಮಕಥಾನಕ ಇದು. ಅಕ್ಷರಲೋಕ ಗೊತ್ತಿಲ್ಲದ ಸಾಮಾನ್ಯನೊಬ್ಬ ಕಲಾ ವಿದ್ವಾಂಸ ಹೇಗಾಗಬಲ್ಲ ಎಂಬುದನ್ನು ಕೃತಿ ಹೇಳುತ್ತದೆ. ಗದ್ದೆ ಕುಣಿಯಲ್ಲಿ ಮಲಗುತ್ತಿದ್ದ, ಎಲ್ಲಿ ಯಕ್ಷಗಾನ ನಡೆದರೂ ಅಲ್ಲಿಗೆ ಹಾರಿ ಹೋಗುತ್ತಿದ್ದ ಉಡುಪಿಯ ಹುಡುಗನೊಬ್ಬ ಯಕ್ಷ ಸಂಜೀವಿನಿಯಾದ ಕತೆ ಇಲ್ಲಿದೆ.
ಸಾಹಿತಿ ಶಿವರಾಮ ಕಾರಂತರು ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅಪಾರ. ಅಂತಹ ಕೊಡುಗೆಗಳಲ್ಲಿ ಸಂಜೀವ ಸುವರ್ಣರೂ ಒಬ್ಬರು. ಕಾರಂತರನ್ನು ಸುವರ್ಣರು ಗುರುವೆಂದೇ ಪರಿಗಣಿಸಿದ್ದರು. ಈಗ ಸಂಜೀವರೇ ಅನೇಕರಿಗೆ ಗುರುಗಳು. ಅವರ ಶಿಷ್ಯರು ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡುತ್ತಿದ್ದಾರೆ. ಪೃಥ್ವಿರಾಜ ಕವತ್ತಾರು ಅವರ ಅನನ್ಯ ಬಗೆಯ ನಿರೂಪಣೆಯ ಕಾರಣಕ್ಕೂ ಕೃತಿ ಗಮನ ಸೆಳೆಯುತ್ತದೆ.
ಪೃಥ್ವಿರಾಜ ಕವತ್ತಾರು- ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಹಳ್ಳಿಯಿಂದ ಬಂದವರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ.ಪದವೀಧರ, ವೃತ್ತಿಯಲ್ಲಿ ಪತ್ರಕರ್ತ. ಚಿತ್ರಪಟ ರಾಮಾಯಣ, ಮರ್ಯಾದಾ ಪುರುಷೋತ್ತಮ, ಸಂಸ್ಮರಣ ಪುಸ್ತಕಗಳ ಪ್ರಕಟಣೆ. ಸಂಪ್ರದಾಯ ಮತ್ತು ಸಮಕಾಲೀನ ಯಕ್ಷಗಾನದ ಪ್ರಯೋಗ ನಡೆಸುವ ಥಿಯೇಟರ್ ಯಕ್ಷದ ಪ್ರವರ್ತಕ. ಪ್ರಸ್ತುತ ಉಡುಪಿಯಲ್ಲಿ ವಾಸ. ...
READ MORE