‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MORE