ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರ ಕೃತಿ-ದಾದಾಗಿರಿಯ ದಿನಗಳು (1981-1991). ಸಮಾಜ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಕೆಲ ಕಾಲ ದಾದಾಗಿರಿಯನ್ನು ಬದುಕನ್ನಾಗಿ (1981-1991) ಸ್ವೀಕರಿಸಿದ್ದ ಲೇಖಕರು ಅಂದಿನ ತಮ್ಮ ಅನುಭವಗಳನ್ನುದಾಖಲಿಸಿದ್ದೇ ಈ ಕೃತಿ. ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ವಿಷವೃತ್ತದ ಜಾಲದಲ್ಲಿ ಸಿಲುಕಿಕೊಳ್ಳಲು ಹೇಗೆ ಅನಿವಾರ್ಯವಾಯಿತು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡಿದ ಸಾಹಸಗಳ ವೃತ್ತಾಂತಗಳು ವಿವರಿಸಿದ್ದಾರೆ. ಆ ಮೂಲಕ, ತಮ್ಮ ಅನಿವಾರ್ಯ ಬದುಕಿನ ತಲ್ಲಣಗಳನ್ನು ತಳಮಳಗಳನ್ನು ಕಟ್ಟಿಕೊಡುವ ಈ ಕೃತಿ ಒಂದರ್ಥದಲ್ಲಿ ಆತ್ಮಕತೆಯೇ ಆಗಿದೆ.
ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...
READ MORE