ನಿವೃತ್ತ ಐಎಎಸ್ ಅಧಿಕಾರಿ ಬಿ. ಪಾರ್ಥಸಾರಥಿ ಅವರ ಕೃತಿ ‘ಕಾರ್ಯಭಾರದ ನೆನಪುಗಳು’. ಸರ್ಕಾರದ ಸೇವೆ ದೇವರ ಸೇವೆ ಎಂಬ ತುಂಬು ಅರ್ಥದ ಮಾತಿನಂತೆ ಬದುಕಿದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಸೇವೆಯ ನೆನಪುಗಳನ್ನು ದಾಖಲಿಸಿರುವ ಕೃತಿ ಇದು.
ಸರ್ಕಾರದಲ್ಲಿ ಸೇವೆ ಸಲ್ಲಿಸುವವರು ಬಹುತೇಕ ಅಸಡ್ಡೆ ಮತ್ತು ಲಂಚಗುಳಿತನಕ್ಕೆ ಬಲಿಯಾಗಿದ್ದಾರೆ ಎಂಬ ಟೀಕೆ ಎಲ್ಲ ಕಡೆ ಕೇಳಿಬರುತ್ತಿದೆ. ಸರ್ಕಾರಿ ಕೆಲಸಕ್ಕಿಂತ ತನ್ನ ಸ್ವಾರ್ಥದ ಕೆಲಸಕ್ಕೆ ಆದ್ಯತೆ ಕೊಟ್ಟು ಅನೇಕ ಸಂದರ್ಭಗಳಲ್ಲಿ ತೊಂದರೆಗೊಳಗಾಗಿ, ಸರ್ಕಾರಕ್ಕೂ, ವಿವಿಧ ಮಟ್ಟದ ಹಿರಿಯ ಅಧಿಕಾರಿಗಳಿಗೂ ಕಳಂಕ ತಂದಿದ್ದಾರೆ. ಇಂತಹ ಪರಿಸರದಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ನೆನಪುಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.