ಡಾ. ಸ.ಜ. ನಾಗಲೋಟಿ ಮಠ ಅವರು ಬರೆದ ಆತ್ಮಕಥನ ಕೃತಿ-ಬಿಚ್ಚಿದ ಜೋಳಿಗೆ. ಬಡತನವು ಜಗತ್ತಿನ ಅತಿ ಶ್ರೇಷ್ಠ ವಿಶ್ವ್ವವಿದ್ಯಾಲಯ ಎಂಬ ಪ್ರಧಾನ ಅಂಶ ಇಲ್ಲಿ ವ್ಯಕ್ತವಾಗುತ್ತದೆ. ಡಾ..ಸ.ಜ.ನಾ {ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ} ತಮ್ಮ ಬಾಲ್ಯ, ಯೌವನ ಮತ್ತು ಕಾಲೇಜು ದಿನಗಳ ವಿವರಣೆ ನೀಡಿದ್ದಾರೆ. ತಂದೆಯ ಮರಣದ ಬದುಕು ತುಂಬಾ ದಯನೀಯವಾಗಿತ್ತು. ಅವಮರ್ಯಾದೆಗಳು ಮುತ್ತಿದ್ದವು. ವರ್ಷಕ್ಕೆ 2 ಜೊತೆ ಬಟ್ಟೆ ಮಾತ್ರ, ಇಂತಹ ಅಸಹನೀಯ ಬದುಕಿನ ಮಧ್ಯೆ ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಸಾಹಸ, ತದನಂತರದ ಬದುಕನ್ನು ಸಹ ಮಾನವೀಯತೆಯೊಂದಿಗೆ ಕಳೆದಿದ್ದು, ಅಸಾಮಾನ್ಯತೆಯ ಬದುಕಿನ ಚಿತ್ರಣ ನೀಡುತ್ತದೆ. ಲೇಖಕರ ಬಗ್ಗೆ ಅಭಿಮಾನ ಮೂಡುತ್ತದೆ. ಸಿಹಿ-ಕಹಿ, ಸಿರಿತನ-ಬಡತನ, ನೋವು-ನಲಿವುಗಳನ್ನು ಸಾಮಾನ್ಯ ಬರಹದ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾರೆ. ಕೆಲಸ ಸಣ್ಣದೋ-ದೊಡ್ಡದೋ, ಮೊದಲು ಅದರಲ್ಲಿ ಪರಿಣಿತಿ ಹೊಂದಬೇಕು. ಸಣ್ಣ ಕೆಲಸ, ನಾನೇಕೆ ಮಾಡಬೇಕು ಎಂಬ ಕೀಳರಿಮೆ ಬಿಡಬೇಕು ಎಂಬುದು ಅವರ ಜೀವನ ಸಂದೇಶ.
©2024 Book Brahma Private Limited.