‘ಮುಳ್ಳುಗಳ್ಳಿ’ ಕೃತಿಯು ರೂಪನಾರಾಯಣ ಸೋನಕರ ಅವರ ಆತ್ಮಕಥನವಾಗಿದೆ. ಹಿಂದಿ ಮೂಲ ಕೃತಿಯನ್ನು ಆರ್.ಪಿ. ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಅಂಬೇಡ್ಕರ್ ದಲಿತರ ದನಿಯಾಗಿ ಬಂದು ಸಮಾನತೆಯ ಕಹಳೆಯೂದಿ ಪ್ರತಿಭಟಿಸದಿದ್ದಲ್ಲಿ ಅವರ ನೋವು - ಅವಮಾನಗಳೆಲ್ಲ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಳ್ಳಿಗಿಡದ ಮುಳ್ಳಿನಂತೆ ಚುಚ್ಚಿ ಚುಚ್ಚಿ ನೋಯಿಸುತ್ತಿದ್ದ ಹಿಂಸೆ ಮತ್ತು ಅಪಮಾನವನ್ನು ಸಹಿಸುತ್ತಲೇ ಸವರ್ಣಿಯರ ಕುಟಿಲಗಳಿಗೆ ದಿಟ್ಟ ಉತ್ತರ ನೀಡಿ ಕವಿ-ಸಾಹಿತಿಯಾಗಿ ಬೆಳೆದುನಿಂತವರು ರೂಪನಾರಾಯಣ ಸೋನಕರ. ತಾವು ಸ್ವತಃ ಅನುಭವಿಸಿದ ಆ ನೋವು ಹೇಗಿತ್ತೆಂದು ಈ ಆತ್ಮಕಥನದಲ್ಲಿ ನಿರೂಪಿಸಿದ್ದಾರೆ. ಮೇಲ್ವರ್ಗದವರ ಅಸಂಬದ್ಧ ನಿಯಮಗಳು, ಅಮಾನುಷ ವರ್ತನೆಗಳಿಂದ ದಿಕ್ಕೆಟ್ಟು ಕಂಗಾಲಾದ ಹಸಿ-ಬಿಸಿ ಘಟನೆಗಳನ್ನು ಸ್ಮರಿಸಿದ್ದಾರೆ. ಹೀಗೆ ನಡೆಸಿಕೊಂಡ ಸಮಾಜದ ಮೇಲೆ ಇವರಿಗೆ ರೋಷ - ದ್ವೇಷ - ಸಿಟ್ಟು - ಸೆಡವು - ಅಗೌರವ ಎಲ್ಲವೂ ಇವೆ. ಜಾತೀಯತೆಯ ಕರಾಳ ಹಸ್ತ ಎಷ್ಟು ಪ್ರಬಲವಾಗಿತ್ತೆಂದರೆ - ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಲೇಖಕರ ಸಹೋದರನಿಂದ ಈ ಪುಸ್ತಕದ ಪುಟ 70-71ರಲ್ಲಿ ವರ್ಣಿಸಿದಂತೆ ವಿಕೃತ ಮನಸ್ಸಿನ ತೃಪ್ತಿಗಾಗಿ ಮಾಡಬಾರದ ಕೆಲಸವೊಂದನ್ನು ಮಾಡಿಸಿತು. ಕಾದ ಕಬ್ಬಿಣಕ್ಕೆ ಹಲವು ಪೆಟ್ಟುಗಳು ಬಿದ್ದಾಗ ಅದು ಹರಿತವಾದ ಒಂದು ಆಯುಧವಾಗಿ ಮಾರ್ಪಡುತ್ತದೆಂಬ ವಿವರಣೆಯನ್ನೂ ಲೇಖಕರು ನೀಡಿದ್ದಾರೆ.
(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)
ಹಿಂಸೆ - ದೌರ್ಜನ್ಯಗಳು ಅಷ್ಟಿಷ್ಟಲ್ಲ. ಅಂಬೇಡ್ಕರ್ ದಲಿತರ ದನಿಯಾಗಿ ಬಂದು ಸಮಾನತೆಯ ಕಹಳೆಯೂದಿ ಪ್ರತಿಭಟಿಸದಿದ್ದಲ್ಲಿ ಅವರ ನೋವು - ಅವಮಾನಗಳೆಲ್ಲ ಸ್ವಲ್ಪವೂ ಕಡಿಮೆಯಾಗುತ್ತಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಕಳ್ಳಿಗಿಡದ ಮುಳ್ಳಿನಂತೆ ಚುಚ್ಚಿ ಚುಚ್ಚಿ ನೋಯಿಸುತ್ತಿದ್ದ ಹಿಂಸೆ ಮತ್ತು ಅಪಮಾನವನ್ನು ಸಹಿಸುತ್ತಲೇ ಸವರ್ಣಿಯರ ಕುಟಿಲಗಳಿಗೆ ದಿಟ್ಟ ಉತ್ತರ ನೀಡಿ ಕವಿ-ಸಾಹಿತಿಯಾಗಿ ಬೆಳೆದುನಿಂತವರು ಶ್ರೀ ರೂಪನಾರಾಯಣ ಸೋನಕರ. ತಾವು ಸ್ವತಃ ಅನುಭವಿಸಿದ ಆ ನೋವು ಹೇಗಿತ್ತೆಂದು ಈ ಆತ್ಮಕಥನದಲ್ಲಿ ನಿರೂಪಿಸಿದ್ದಾರೆ. ಮೇಲ್ವರ್ಗದವರ ಅಸಂಬದ್ಧ ನಿಯಮಗಳು, ಅಮಾನುಷ ವರ್ತನೆಗಳಿಂದ ದಿಕ್ಕೆಟ್ಟು ಕಂಗಾಲಾದ ಹಸಿ-ಬಿಸಿ ಘಟನೆಗಳನ್ನು ಸ್ಮರಿಸಿದ್ದಾರೆ. ಹೀಗೆ ನಡೆಸಿಕೊಂಡ ಸಮಾಜದ ಮೇಲೆ ಇವರಿಗೆ ರೋಷ - ದ್ವೇಷ - ಸಿಟ್ಟು - ಸೆಡವು - ಅಗೌರವ ಎಲ್ಲವೂ ಇವೆ. ಜಾತೀಯತೆಯ ಕರಾಳ ಹಸ್ತ ಎಷ್ಟು ಪ್ರಬಲವಾಗಿತ್ತೆಂದರೆ - ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಲೇಖಕರ ಸಹೋದರನಿಂದ ಈ ಪುಸ್ತಕದ ಪುಟ ೭೦-೭೧ರಲ್ಲಿ ವರ್ಣಿಸಿದಂತೆ ವಿಕೃತ ಮನಸ್ಸಿನ ತೃಪ್ತಿಗಾಗಿ ಮಾಡಬಾರದ ಕೆಲಸವೊಂದನ್ನು ಮಾಡಿಸಿತು. ಕಾದ ಕಬ್ಬಿಣಕ್ಕೆ ಹಲವು ಪೆಟ್ಟುಗಳು ಬಿದ್ದಾಗ ಅದು ಹರಿತವಾದ ಒಂದು ಆಯುಧವಾಗಿ ಮಾರ್ಪಡುತ್ತದೆಂಬ ವಿವರಣೆಯನ್ನೂ ಲೇಖಕರು ನೀಡಿದ್ದಾರೆ. ಈ ಆತ್ಮಕಥೆ ಮರಾಠಿಯ ಉತ್ತಮ ದಲಿತ ಆತ್ಮಕಥೆಗಳಲ್ಲೊಂದೆಂದು ಅಭಿಪ್ರಾಯಪಡಲಾಗಿದೆ. ಮರಾಠಿಯಲ್ಲಿನ ಇತರ ದಲಿತರ ಆತ್ಮಚರಿತ್ರೆಗಳನ್ನು ನವಕರ್ನಾಟಕ ಪ್ರಕಟಿಸಿದೆ.
©2024 Book Brahma Private Limited.