ಮನುಷ್ಯನಿಗೆ ಕನಸುಗಳು ಬೇಕು. ಆದರೆ, ಕನಸು ಕಾಣುವುದೇ ಹುಚ್ಚುತನದ ಲಕ್ಷಣ. ಕನಸು ನನಸಾದಾಗ ಉಬ್ಬುವುದಿಲ್ಲ. ಕನಸು ಮುಗ್ಗರಿಸಿದಾಗ ಕುಗ್ಗುವುದಿಲ್ಲ. ಆದರೂ ಕನಸುಗಳನ್ನು ಕಾಣುತ್ತಲೇ ಮನುಷ್ಯ ತನ್ನ ಜೀವನಾದರ್ಶವನ್ನು ಕಂಡುಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಯತ್ನಿಸಬೇಕು. ಇಂತಹ ಕನಸುಗಳ ಸವಾರಿ ಮಾಡುವವನು ಧೀರನಿರಬೇಕು. ಶೂರನಿರಬೇಕು. ಪ್ರಯತ್ನಶೀಲನಾಗಿರಬೇಕು. ತಾಳ್ಮೆಯಿಂದ ಜೀವನ ಪ್ರೀತಿ ಹೊಂದಿರಬೇಕು ಎಂಬ ಮೂಲ ಆಶಯದೊಂದಿಗೆ ಆತ್ಮ ಚರಿತ್ರೆಯನ್ನುಲೇಖಕ ಸಂಗಮೇಶ ತಮ್ಮನಗೌಡ್ರ ಬರೆದಿದ್ದಾರೆ.
ಮೊದಲ ಬಾರಿಗೆ ಮದ್ರಾಸಿಗೆ ಹೋದಾಗ, ಅಕ್ಕಲಕೋಟೆಯ ಆ ಬಿಸಿಲ ನೆನಪು, ಮಧುರೈನಲ್ಲಿ ಕಳೆದ ಆ ದಿನಗಳು, ಮೋಹಕ ನಗರಿ ಮುಂಬೈನಲ್ಲಿ ಕಂಡ ಕೆಲ ಅನುಭವಗಳು, ಒಂಟಿಗಾಲ ಮೇಲೆ ವಿಶ್ವವಿದ್ಯಾಲಯದಲ್ಲಿ ನಿಂತಾಗ, ಪಿಎಚ್ ಡಿ ಮಹಾಪ್ರಬಂಧಧ ಸಂದರ್ಶನದ ಆ ಕ್ಷಣ ಹೀಗೆ ತಮ್ಮ ಬದುಕಿನ ಅಮೂಲ್ಯ ಕ್ಷಣಗಳಿಗೆ ಸ್ಪಂದಿಸುತ್ತಾ ಈ ಆತ್ಮಚರಿತ್ರೆಯು ಓದುಗರನ್ನು ತನ್ನತ್ತಾ ಸೆಳೆಯುತ್ತದೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE