ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಅವರ ಆತ್ಮಕಥನ ವಿಜಯ ವಿಕಾಸ. ವಿ.ಬಿ.ಕುಳಮರ್ವ ಅವರ ಮುನ್ನುಡಿ ಹಾಗೂ ಡಾ। ಹರಿಕೃಷ್ಣ ಭರಣ್ಯ ಅವರ ಬೆನ್ನುಡಿಯನ್ನು ಹೊಂದಿರುವ ಕೃತಿಯಿದು. "ನನ್ನ ಆತ್ಮಕಥೆ ಎಂದರದು ನನ್ನ ಜೀವನದಲ್ಲಿ ಸಾಗಿ ಹೋದ ವಿಚಾರ. ಊಹಾಪೋಹವಲ್ಲ. ಜೀವನದ ಅನುಭವ ಮತ್ತು ನಡೆದು ಬಂದ ನಿಜ ಕಥೆ. ಬುದ್ಧಿ ಬಂದಾಗಿನಿಂದ ನೆನಪು ಮಾಡುತ್ತಾ ಮಾಡುತ್ತಾ ಪೋಣಿಸಿದ ನಿಜ ಮಣಿಗಳ ಕಥಾನಕ" ಎನ್ನುವ ಲೇಖಕಿ ಹಲವರ ಜೀವನದಲ್ಲಿ ಸಾಹಿತ್ಯ ವಿಚಾರಗಳಲ್ಲಿ ಪ್ರೋತ್ಸಾಹವನ್ನು ಇತ್ತವರು. ಆಕೆ ನನಗೂ ಆತ್ಮೀಯರು. ಗುರು ಸಮಾನರು ಹೌದು. ಸುಮಾರು ಇಪ್ಪತ್ತನಾಲ್ಕು ಅಧ್ಯಾಯದ ಬೃಹತ್ ಹೊತ್ತಗೆಯಾಗಿರುವ ವಿಜಯವಿಕಾಸವು ಲೇಖಕಿಯ ಮನದಾಳವನ್ನು ಓದುಗರಿಗೆ ತೆರೆದಿಟ್ಟಿದೆ.
ಕತೆಗಾರ್ತಿ ವಿಜಯಾ ಸುಬ್ರಮಣ್ಯ ಅವರು ಕಾಸರಗೋಡಿನ ಪೆರಡಾಲದಲ್ಲಿ ಜನಿಸಿದರು. ‘ಜಾನಪದ ಗೀತೆಗಳು’ ಅವರ ಕಥಾ ಸಂಕಲನ. ‘ಹೊಂಗಿರಣ, ಹತ್ತೆಸಳು, ಪುರಾಣ ಪುನೀತೆಯರು, ಇಷ್ಟಾರ್ಥಪ್ರದ ವಿಷ್ಣು ನಾಮಾವಳಿ, ಪುರಾಣಪುರುಷ ರತ್ನಗಳು’ ಅವರ ಮತ್ತಿತರ ಕೃತಿಗಳು. ಅವರಿಗೆ ‘ಗಂಗೊಳ್ಳಿ ಸಾರಕ ದತ್ತಿನಿಧಿ ಪುರಸ್ಕಾರ, ಕೊಡಗಿನ ಗೌರಮ್ಮ ಪ್ರಶಸ್ತಿ, ಶ್ರೀಮತಿ ಜಯಲಕ್ಷಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಬಹುಮಾನ’ ಲಭಿಸಿದೆ. ಕೊಡಗಿನ ಗೌರಮ್ಮ ದತ್ತಿನಿಧಿ ಸಂಚಾಲಕಿ, ಅಂಕಣಕಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ...
READ MORE