ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ ...

Author : ರೇವತಿ

Pages 450

₹ 200.00




Year of Publication: 2022
Published by: ರೇವತಿ ಪ್ರಕಾಶನ
Address: ಮನೆ ನಂ. 36, ಸದಾಶಿವನಗರ, ಮಿಚಿಗನ್ ಕಂಪೌಂಡ್, ಧಾರವಾಡ - 580 001
Phone: 9380999406

Synopsys

ಲೇಖಕಿ ರೇವತಿ ಅವರ ಆತ್ಮಕಥನ ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ಇದು ಆತ್ಮ ಕಥೆ ಅನ್ನುವುದುಕ್ಕಿಂತ ನನ್ನ ಅನುಭವಗಳನ್ನು ಹಂಚಿಕೊಂಡು ಬರೆದಿದ್ದು, ನಾನು ಬರೆದ, ಉದ್ದೇಶ ನನ್ನ ಜೀವನದ ಅನುಭವಗಳು, ನನ್ನ ಕಥೆ, ನನ್ನ ತಾಯಿ, ಅಜ್ಜಿ, ಇನ್ನಿತರ ಹೆಂಗಸರಂತೆ,ಅಲ್ಲ.ನನ್ನ ಜೀವನ ಒಂದು ವಿಶೇಷವಾದದ್ದು, ವಿಶಿಷ್ಟವಾದದ್ದು.ಎಲ್ಲವೂ ಸರಿಇದ್ದು, ನನ್ನ ದೈಹಿಕ ತೊಂದರೆಗಳು, ಹೆರಿಗೆ ತೊಂದರೆಗಳು, ತಪ್ಪು ಚಿಕೆತ್ಸೆಗಳು, ಅತಿಯಾದ ಔಷಧಿ ಪರಿಣಾಮ, ಇವುಗಳಿಂದ ಬಹಳಷ್ಟು ತೊಂದರೆ ಗಳನ್ನು,ನಾನು ಮನೆಯವರು ಅನುಭವಿಸಬೇಕಾಯಿತು. ಇಲ್ಲಿ ಯಾರಬಗ್ಗೆಯಾಗಲಿ, ಯಾವುದರ ಬಗ್ಗೆ, ದೂರಲೆಂದು,ಅಲ್ಲ, ನಮ್ಮ ನಮ್ಮ, ಕರ್ಮಾನುಸಾರ ವಿಧಿ ನಿಯಮದಂತೆ, ನಡೆಯುತ್ತಿರುತ್ತದೆ, ಅದಕ್ಕೆ ಕೆಲವರು ಪಾತ್ರ ದಾರಿ ಆಗಿರು ತ್ತಾರೆ, ಅದೆಲ್ಲ ಅನುಭವಿಸಿದ ನಂತರ, ನನಗೆ ಸಿಕ್ಕ "ಸಾರ್ಥಕ್ಯ!ದ ಅನುಭವ ಅನುಗೃಹ, ವರ್ಣಿಸಲು ಸಾಧ್ಯವಿಲ್ಲ, ಈ ಅನುಭವ ಉಂಟಾಗಲು, ಏನೇನು ಆಯ್ತು, ನನಗೆ ಸಾಹಿತ್ಯ ದಲ್ಲಿ ಆಸಕ್ತಿ ಇರುವುದರಿಂದ ನನ್ನ ಜೀವನವನ್ನು, "ಅವಲೋಕನ," ಮಾಡಿ ಕೊಂಡಾಗ, ಹೊರಗೆ ಸಾಮಾಜಿಕ ವಾಗಿ ಯಾವುದೇ ಸಾಧನೆ ಯಾಗಲಿ ಜನಪ್ರಿಯತೆ ಯಾಗಲಿ ಇಲ್ಲವಾದರು, ಇಷ್ಟೆಲ್ಲಾ, ಅನುಭವ ಗಳು ವಿಚಾರ ಗಳುಹಾಗೆ"ವ್ಯರ್ಥಗೊಳಿಸಲು"ಮನಸ್ಸಾಗದೆ, ಸಂಕ್ಷಿಪ್ತ ವಾಗಿಬರೆದಿದ್ದೇನೆ, ಬರೆಯಬೇಕೆಂದು ಬಹಳ ದಿವಸ ದಕನಸು,ಬರೆಯಲು ತೊಡಗಿದಾಗ, ಯಾವುದೇ,,: ಪೂರ್ವ: ತಯಾರಿ ಇರಲಿಲ್ಲ,ಊರಿನ ವಿಷಯ ವಾಗಲಿ ಅದನ್ನು ಪರಿಚಯಿಸುವ, ಇನ್ನಿತರ ಯೋಜನೆ ಗಳಿರಲಿಲ್ಲ,ಬರೆಯುತ್ತಾ, ತಾನಾಗಿ ವಿಷಯ ಗಳು ಹೊಳೆದು,ಸಲಿಸಾಗಿ ಬರೆಯಲು ತೊಡಗಿದೆ, ಅಲ್ಲಿ ನಾನು, ನಿಮಿತ್ತ ಮಾತ್ರವಾದೆ,ನಾನು ನಿಮಿತ್ತ ಎಂಬ ಪದ ಉಪಯೋಗಿಸಿದ್ದು ಪೂರ್ಣ ಓದಿದ ಮೇಲೆ, ಅರ್ಥವಾಗುತ್ತದೆ, ಪುಸ್ತಕ ದಲ್ಲಿ ಪ್ರಾರಂಭಿಕ ವಾಗಿ,ನಾನು ಬೆಳೆದು ಬಂದ ಹಳ್ಳಿ,ಯ ಜೀವನದ ಸಾಂಸ್ಕೃತಿಕ, ಮತ್ತು ಸಂಪ್ರದಾಯ,ಅಲ್ಲಿಯ, ಹಬ್ಬ ಗಳು ಮತ್ತು ನಮ್ಮ, ಮನೆಯಲ್ಲಿ, ಶಿವರಾತ್ರಿ ಹಬ್ಬದ ವಿಶೇಷತೆ, ಚರಂತಿಮಠ,ದ ಆಮಠದವರು, ಪ್ರತಿದಿನ ಹೋಳಿಗೆ ಊಟ ಹಾಕಿ ಭಾವಿ ತೆಗಿ ಸಿದ್ದು, ಊರಿನ ಜನ ಭಾವಿ ನೀರು ವೈ ಯುವುದು, ನಮ್ಮ ತಂದೆ ತಾಯಿ, ಊರಿಂದ ಬಂದಾಗ ಆಮಠದಲ್ಲಿ ಆಶ್ರಯ ನೀಡಿದ್ದರು, ನಮ್ಮತಂದೆ ಡಾಕ್ಟರ್, ಬೇರೆ ಮನೆ ಕೊಂಡ ಮೇಲೆ ಆಮಠ ಬಿಟ್ಟು ಬಂದದ್ದು,ಆಊರಿನ ಎಮ್,ಎಲ್,ಎ, ಅವರು ನಮ್ಮ ತಂದೆಗೆ ಸಹಾಮಾಡಿದ್ದು,ನಮಣ್ಣ,ನಾನು ಜನಿಸಿದ್ದು, ನಮ್ಮ ದೊಡ್ಡಪ್ಪ ನಕುತತಂತ್ರದಿಂದ ನಮ್ಮ ತಂದೆ ಕುಡಿಯಲು ತೊಡಗಿ ನಾವೆಲ್ಲರೂ ತೊಂದರೆ ಗೆ ಒಳಗಾಗಿದ್ದು, ಇಲ್ಲಿಂದ, ಶ್ರೀಯುತರ, ಮುನ್ನುಡಿ, ಸಾಮಾಜಿಕ, ಸಾಂಸಾರಿಕ, ಮಾನಸಿಕ, ಅಧ್ಯಾತ್ಮಿಕ,, ದೈವಿಕ, ಮುಂತಾದ ಅಂಶಗಳು, ಲೇಖಕಿ ಯಮೇಲೆ, ಬೀರಿರುವ ಪ್ರಭಾವವನ್ನು, ತನ್ಮೂಲಕ ಅವರಿಗೆ, ಸಂಸ್ಕಾರ, ವೈವಿಧ್ಯಗಳನ್ನು, ಅದರಿಂದ ಲಭ್ಯವಾದ ಅನುಭವ ಗಳ, ವರ್ಣಮಯ, ಛಾಯೆಗಳನ್ನು, ನಾವು ಮನಗಾಣ ಬಹುದು, ಪುಸ್ತಕದುದ್ದಕ್ಕೂಅಲ್ಲಲ್ಲಿ, ಪ್ರಸಂಗ ತ್ವೇನ ಹರಡಿ ಕೊಂಡಿರುವ,ಇಂಥ ಉದಾಹರಣೆಗಳಲ್ಲಿ, ಗಮನಸೆಳೆಯುವ,ಕೆಲವೊನ್ನು, ಆಯ್ದು ಅವನ್ನು, ಒಂದು ಕ್ರಮ ದಲ್ಲಿಸಂಕಲಿಸಿ, ಗಮನಿಸಲು, ಯತ್ನಿಸಿದ್ದೇನೆ, ಕೌಟುಂಬಿಕ, ಸಾಮಾಜಿಕ, ವಿದ್ಯಮಾನಗಳು,ಈ ಪುಸ್ತಕ ದಮೂಲವೇದಿಕೆ, ಇದರಲ್ಲಿ,ತಂದೆ ತಾಯಿ, ಮಗಳು,ಅಳಿಯ, ಬಂಧುಗಳು, ಸ್ನೇಹಿತರು,ನೆರೆ ಹೊರೆ ಯವರು, ಮುಂತಾದವರು, ಸ್ವಾಭಾವಿಕವಾಗಿ ವರ್ಣಿತವಾಗಿದ್ದು, ಇವುಗಳ ಹಿಣ್ಣೆಲೆ ಯಲ್ಲಿ ಯಾರೂ, ಬದುಕಿನಲ್ಲಿ ಕಲಿಯಬಹುದಾದ, ವೈವಿಧ್ಯಮಯ ಪಾಠಗಳು ಅಡಗಿವೆ,ನೆರೆ ಹೊರೆ ಯವರ ಪೈಕಿ ಕೆಲವರ ಪ್ರೀತಿ, ಸಹಾನುಭೂತಿಗಳು, ಕೆಲವರಲ್ಲಿ,ಸ್ವಾರ್ಥ ಎಂದಿದ್ದಾರೆ. 

About the Author

ರೇವತಿ

ಲೇಖಕಿ ರೇವತಿ ಬಾಗಲಕೋಟೆ ಜಿಲ್ಲೆಯವರು. ಮೊದಲಿಂದಲೂ ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಇವರು ಹೆಚ್ಚಿಗೆ ಆಧ್ಯಾತ್ಮಿಕ ಪುಸ್ತಕಗಳ ಬಗ್ಗೆ ಹೆಚ್ಚಿನ ಒಲವು ತೋರಿದವರು. ಕೃತಿ: ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ ...

READ MORE

Related Books