ರಾಣಿ ಶಿವಶಂಕರ ಶರ್ಮರ ಆತ್ಮಕಥವನ್ನು ಕನ್ನಡಕ್ಕೆ ತಂದಿದ್ದಾರೆ ಬರಹಗಾರ ಲಕ್ಕೂರು ಆನಂದ.
ಇಲ್ಲಿ ರಾಣಿ ನರಸಿಂಹಶಾಸ್ತ್ರಿಗಳು ಬ್ರಾಹ್ಮಣತ್ವವೆಂಬ ಮರದ ಕೊನೆಯ ಎಲೆಯಾಗಿ ಕಂಡು ಬರುತ್ತಾರೆ. ಅವರಿಗೆ ಆ ಜಾತಿಯನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ವರ್ಗದವರು ಹೇಗೆ ಆಸ್ಪಶ್ಯರೋ ಹಾಗೇ ಬ್ರಾಹ್ಮಣ ಕುಲದ ಮಹಿಳೆಯರು ಹಾಗೆ ಅಸ್ಪೃಶ್ಯರು ಎಂದು ಭಾವನೆ ಇದೆ. ಅವರೇ ಹೇಳುವ ಹಾಗೆ ಬ್ರಾಹ್ಮಣರಿಗೆ ಗುಡಿಯ ಕಲ್ಪನೆಯಿಲ್ಲ. ಅವರು ಮನೆಯಲ್ಲಿಯೇ ಪೂಜೆ ಮಾಡಬೇಕು. ಹಾಗೆ ಮಹಿಳೆಯರಿಗೆ ಗಾಯತ್ರಿ ಮಂತ್ರ ಪಠಣೆಗೆ ಅವಕಾಶವಿಲ್ಲ. ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಇಲ್ಲ. ಆಧುನಿಕತೆಯನ್ನು ಸಾಯುವವರೆಗೆ ಹತ್ತಿರಕ್ಕೆ ಬಿಟ್ಟುಕೊಳ್ಳದ ನರಸಿಂಹಶಾಸ್ತ್ರಿಗಳು ಕಡೆಯದಾಗಿ ದರ್ಶನದ ಕಡೆಗೆ ಹೊರಳುತ್ತಾರೆ. ತಾನೇ ಈ ಕುಲದ ಕಡೆಯ ವ್ಯಕ್ತಿ. ನಾನು ಆದಮೇಲೆ ಇರುವ ಎಲ್ಲರೂ ಬ್ರಾಹ್ಮಣರಲ್ಲ ಎಂದು ಹೇಳುತ್ತಾರೆ. ಅವರು ಸಂಕರ ಜಾತಿಯ ಸಂತಾನಗಳೆಂದು ನರಸಿಂಹಶಾಸ್ತ್ರಿಗಳು ವಾದಿಸುತ್ತಲೇ ಇರುತ್ತಾರೆ. ಅಂಬೇಡ್ಕರ್ ಎಂಬ ಬ್ರಾಹ್ಮಣ ವ್ಯಕ್ತಿಯ ಹೆಸರನ್ನು ಬಾಬಾ ಸಾಹೇಬರು ತನ್ನ ಹೆಸರಿನ ಕೊನೆಗೆ ಯಾಕೆ ಇಟ್ಟುಕೊಂಡರು? ಅದಕ್ಕೆ ಕಾರಣಗಳೇನು ಎಂಬುದನ್ನು ಬಹು ತಾರ್ಕಿಕವಾಗಿ ತನ್ನ ಮಗನಾದ ತತ್ವವಿದಾನಂದ ಸ್ವಾಮೀಜಿಯವರೊಂದಿಗೆ ತರ್ಕಿಸುವ ಅಧ್ಯಾಯ ಬಹು ಕುತೂಹಲಕಾರಿಯಾಗಿದೆ.
©2024 Book Brahma Private Limited.