ವಿಜ್ಞಾನ ಲೇಖಕ ಜಿ.ಟಿ. ನಾರಯಣರಾವ್ ಅವರ ಆತ್ಮಕಥನ 'ಮುಗಿಯದ ಪಯಣ'. ಅರವತ್ತೇಳನೆಯ ವಯಸ್ಸಿನಲ್ಲಿ ಅವರು ಇದನ್ನು ಬರೆದರು. ಸಣ್ಣ ಸಂಕೋಚದಿಂದಲೇ ಅವರು ತಮ್ಮ ಕಥನವನ್ನು ಓದುಗರೆದುರು ಒಪ್ಪಿಸಿದಂತಿದೆ. "ಒಬ್ಬಾತನ ಕಾರ್ಯ ಶೋಧನೆಗಳನ್ನು ಸಿಂಹಾವಲೋಕಿಸಿದಾಗ ಅವು ಆತನಿಗೆ ಹೇಗೆ ಕಾಣುತ್ತವೆಂಬುದನ್ನು ಆತನೊಂದಿಗೆ ದುಡಿಯುತ್ತಿದ್ದವರಿಗೆ ತೋರಿಸಿಕೊಡುವುದು ಓಳೆಯದೆಂಬ ಕಾರಣಕ್ಕಾಗಿಯೂ ಈ ಕೆಲಸಕ್ಕೆ ಕೈಹಾಕಿದ್ದೇನೆ. ಇಂಥ ಯಾವುದೇ ಪ್ರಯತ್ನ ಎಷ್ಟು ಅಪರಿಪೂರ್ಣವೆಂಬುದನ್ನು ಸ್ವಲ್ಪ ಆತ್ಮಶೋಧಾನಂತರ ಅರಿತೆ" ಎಂದು ಅವರು ಹೇಳಿಕೊಂಡಿದ್ದಾರೆ.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE