‘ಶೃತಿ ಪ್ರೇಮಾಯಣ’ ಕನ್ನಡದ ಪ್ರತಿಭಾವಂತ ನಟಿ ಶ್ರುತಿ ಅವರ ಜೀವನ ಕಥನ. ಈ ಕೃತಿಯನ್ನು ಕಗ್ಗೆರೆ ಪ್ರಕಾಶ್ ಅವರು ರಚಿಸಿದ್ದಾರೆ. ಈ ಪುಸ್ತಕದಲ್ಲಿ ಸ್ವಯಂ ಶ್ರುತಿ ಅವರೇ ಹೇಳಿಕೊಂಡಿರುವ ಹಲವು ವಿಚಾರಗಳಿವೆ. ಲೇಖಕರು ಸರಳ ಮತ್ತು ನೇರ ಭಾಷೆಯಲ್ಲಿ ನಿರೂಪಿಸಿದ್ದಾರೆ. ಇಲ್ಲಿ ಶ್ರುತಿ ಅವರ ಬಾಲ್ಯ, ಬೆಳವಣಿಗೆ, ಸಿನಿಮಾ ಜೀವನಾನುಭವ, ಪ್ರೀತಿ ಪ್ರೇಮ, ಆಶ್ರಮವಾಸ, ಮದುವೆ, ರಾಜಕೀಯ, ಮಗಳು, ಅಭಿಮಾನಿಗಳು ಸೇರಿದಂತೆ ವಿಭಿನ್ನ ಒಳನೋಟಗಳಿವೆ. ಜೊತೆಗೆ ನಿರ್ದೇಶಕ ಮಹೇಂದರ್ ಜೊತೆಗಿನ ಕನಸು-ಮುನಿಸುಗಳನ್ನು ತೆರೆದಿಟ್ಟಿರುವುದು ಈ ಜೀವನ ಕಥನದ ಗಟ್ಟಿತನವನ್ನು ಹೆಚ್ಚಿಸಿದೆ.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...
READ MORE