ಎಂ ಎಸ್ ಎನ್ ಹೆಜ್ಜೆಗಳು ಆತ್ಮಕತೆಯ ರಸ ನಿಮಿಷಗಳು ಎಂ. ಎಸ್ ನರಸಿಂಹಮೂರ್ತಿ ಅವರ ಕೃತಿಯಾಗಿದೆ. ತಮ್ಮ ಬದುಕಿನ ಮಧುರ ಕ್ಷಣಗಳು, ಭೇಟಿಯಾದ ವ್ಯಕ್ತಿಗಳೊಂದಿಗಿನ ಸರಸ ಸಂಭಾಷಣೆ, ಶಾಲಾದಿನಗಳ ತುಂಟಾಟ, ವಿದೇಶದಲ್ಲಾದ ಅನುಭವ, ಮೊದಲಾದನ್ನು ಲೇಖಕ ಇಲ್ಲಿ ಮೆಲುಕು ಹಾಕಿದ್ದಾರೆ. ಮಂಗಳ ಪತ್ರಿಕೆಯಲ್ಲಿ 60 ವಾರಗಳ ಕಾಲ ಇವು ಪ್ರಕಟವಾಗಿತ್ತು.
ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ. ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...
READ MOREhttps://vistaranews.com/art-literature/sunday-read-kannada-book-extract-by-ms-narasimha-murthy-pages-of-autobiography/292065.html