ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ವೃತ್ತಿಯಿಂದ ಶಿಕ್ಷಕರು. ತಮ್ಮ ವೃತ್ತಿಯ 20 ವರ್ಷಗಳ ಸುದೀರ್ಘ ಅವಧಿಯಲ್ಲಿ ಬೋಧನೆ, ಕಲಿಕೆ, ಶಿಕ್ಷಕರ ಕರ್ತವ್ಯ, ಪಾಲಕರ ಕರ್ತವ್ಯ, ಸಮಾಜದಲ್ಲಿರುವ ಜನರ ಅಭಿಪ್ರಾಯಗಳು, ಆಡಳಿತದ ಒತ್ತಡ ಹೀಗೆ ಹತ್ತು ಹಲವು ದೃಷ್ಟಿಯಿಂದ ತಾವು ಕಂಡುಂಡ ಅನುಭವವನ್ನು ತಮ್ಮ ಆತ್ಮಕಥೆಯ 5ರ ಭಾಗವಾಗಿ ಈ ಕೃತಿಯನ್ನು ರಚಿಸಿದ್ದಾರೆ.
ಶಿಕ್ಷಕ ವೃತ್ತಿಗೂ ಮುನ್ನ ನನ್ನ ಬದುಕು, ಶಿಕ್ಷಕ ವೃತ್ತಿಯೊಂದಿಗೆ ಕಲಿಯುವ ಹಂಬಲ, ಸಮಯ ಪಾಲನೆ, ಕರ್ತವ್ಯ ಪ್ರಜ್ಞೆ, ನಾನು ವಿದ್ಯಾರ್ಥಿಗಳನ್ನು ಕಾಣುವ ಬಗೆ, ಶಿಕ್ಷಕ ವೃತ್ತಿಯೊಂದಿಗೆ ಸಂಘಟನೆ ಕೆಲಸ, ನಾನು ಬರೆದ ಪುಸ್ತಕಗಳ ಬಿಡುಗಡೆಯ ಅನುಭವಗಳು ಹೀಗೆ ತಾವು ವಿವಿದೆಡೆ ವರ್ಗವಾಗಿ ಹೋದ ಮತ್ತು ಅಲ್ಲಿಯ ಶಾಲೆ ಸೇವೆಯ ಅನುಭವಗಳು ಈ ಕೃತಿಯ ಜೀವಾಳವಾಗಿವೆ. ಇವು ಯಾರನ್ನೇ ಕುರಿತು ವ್ಯಂಗ್ಯ ನೋಟ ಬೀರಿ ಬರೆದ ಅನಿಸಿಕೆಗಳಲ್ಲ. ವೃತ್ತಿಯೊಂದಿಗೆ ಬರೆಹವೂ ಕೈಗೊಂಡಿದ್ದು ಸವಾಲೆಂಬಂತೆ ಸ್ವೀಕರಿಸಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.