ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರು ಬರೆದ ಆತ್ಮಕತೆ-ಸ್ಮೃತಿಪಟಲದಿಂದ ಸಂಪುಟ-3. ಕಾರಂತರು ‘ಸಮಾಜ ಮತ್ತು ನಾನು‘, ‘ಬಂಧುಮಿತ್ರರು ಮತ್ತು ನಾನು‘, ‘ನಾನು ಮತ್ತು ಕನಸು‘ಗಳಂತಹ ಅಧ್ಯಾಯಗಳಲ್ಲಿ ತಮಗೆ ಈ ನಂಟುಗಳು ಬೆಳೆದು ಬಂದಿದ್ದನ್ನು ವಿವರಿಸಿದ್ದಾರೆ. ತಮ್ಮ 60 ವರ್ಷದ ಸಾಹಿತ್ಯಕ ಸಾಧನೆಗಳು, ಅನುಭವಗಳನ್ನು ದಾಖಲಿಸಿದ್ದಾರೆ. ಸಮಾಜ ಬಂಧುಮಿತ್ರರು ಮತ್ತು ಲೇಖಕರ ಕನಸುಗಳಿಗೆ ಸಂಬಂಧಿಸಿದ ಅನೇಕ ವಿವರಗಳಿವೆ. ಸಾಮಾಜಿಕವಾಗಿ ಪ್ರಾಮುಖ್ಯತೆ ಪಡೆದ ವ್ಯಕ್ತಿಯ ವಿಚಾರಗಳು, ಅವರಿಂದ ಪಡೆದ ಪ್ರೇರಣೆಗಳು, ಋಣ ಹಾಗೂ ಕಹಿ ಅನುಭವಗಳನ್ನು ವಿವರಿಸಿದ್ದಾರೆ.
ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1979ರಲ್ಲಿ (ಪುಟ:409) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE