ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ತಮ್ಮ ಸಾಹಿತ್ಯಕ ಅನುಭವಗಳನ್ನು ಆತ್ಮಚರಿತ್ರೆಯ -4ರ ಭಾಗವಾಗಿ ಪ್ರಕಟಿಸಿದ ಕೃತಿ-ನನ್ನ ಸಾಹಿತ್ಯ ಪ್ರೇರಣೆಯ ನೆಲೆಗಳು. ಭೂಮಿಯ ಮೇಲೆ ಬದುಕುವುದು ಕೆಲ ವರ್ಷಗಳೇ ಆದರೂ ಮನುಷ್ಯ ತಾನು ನೆಮ್ಮದಿಯಿಂದ ಇದ್ದು ಇತರರನ್ನು ನೆಮ್ಮದಿಯಾಗಿ ಜೀವಿಸಲು ಬಿಡಲಾರನು. ಇದರಿಂದ ಯಾರೂ ನೆಮ್ಮದಿಯ ಜೀವನ ನಡೆಸಲಾಗದು. ಸಾಹಿತ್ಯವು ತಮಗೆ ಇಂತಹ ತತ್ವಗಳನ್ನು ಕಲಿಸಿದೆ ಎಂದೂ ಹಾಗೂ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದವರನ್ನು ಸ್ಮರಿಸುವುದು ತಮ್ಮ ಜೀವನದ ಬಹು ಮುಖ್ಯ ಭಾಗವೆಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಸಾಹಿತ್ಯದ ನಿಜ ಸಂಸ್ಕಾರ ಕೊಟ್ಟವರು, ನನ್ನ ಬರವಣಿಗೆಯ ವಿಕಾಸಕ್ಕೆ ಬೆನ್ನು ಚಪ್ಪರಿಸಿದವರು, ಅನಿವಾರ್ಯ ಕಸುಬಾಗಿ ಬೆಳೆದ ನನ್ನ ಸಾಹಿತ್ಯ, ನನ್ನ ಸಾಹಿತ್ಯ ಬೆಳವಣಿಗೆಯಲ್ಲಿ ಅಪಸ್ವರದ ಪ್ರಸಂಗಗಳು, ಜನತೆಯತ್ತ ನನ್ನ ಸಾಹಿತ್ಯ ಯಾತ್ರೆ ಹೀಗೆ ಹಲವು ಅಧ್ಯಾಯಗಳ ಮೂಲಕ ತಮ್ಮ ಸಾಹಿತ್ಯ ರಚನೆಯ ನೆಲೆಗಳನ್ನು ಶೋಧಿಸುತ್ತಾ ಸಂಭ್ರಮಿಸುತ್ತಾರೆ.
ಬಹುಜನರ ಪ್ರೇರಣೆಯಿಲ್ಲದೇ ಯಾವುದೇ ಒಬ್ಬ ಸಾಹಿತಿಯ ಬೆಳೆಯಲಾಗದು. ಗುರುವಿನ ಪ್ರೇರಣೆ, ಬರಹಗಾರರ ಹೇಶಣೆ, ಸಹೃದಯರ ಪ್ರೇರಣೆ, ಎಲ್ಲಕ್ಕೂ ಮಿಗಿಲಾಗಿ ತಂದೆ-ತಾಯಿಗಳ ಪ್ರೇರಣೆ ಅಗತ್ಯ. ಜನರ ಪ್ರೇರಣೆಯಿಂದ ನಾನು ಒಬ್ಬ ಸೃಜನಶೀಲ ಸಾಹಿತಿಯಾಗಿ ಬೆಳೆಯಲು ಕಾರಣವಾಯಿತು. ಬಹುಜನರ ಪ್ರೇರಣಾತ್ಮಕ ಋಣಾನುಬಂಧವು ನನ್ನ ಮೇಲಿದೆ. ಆ ನೆನಹಿನ ಪಾಮಾಣಿಕ ಪ್ರಯತ್ನವು ಈ ಕೃತಿಯಲ್ಲಿ ಆಗಿದೆ.
(ಕೃತಿಯ ಬೆನ್ನುಡಿಯಲ್ಲಿ ಬರೆದುಕೊಂಡ ಲೇಖಕರ ಮಾತುಗಳು...)
©2024 Book Brahma Private Limited.