ಹಿರಿಯ ಲೇಖಕಿ ಶ್ಯಾಮಲಾ ಮಾಧವ ಅವರ ಆತ್ಮಕಥನ- ನಾಳೆ ಇನ್ನೂ ಕಾದಿದೆ. ಗಾನ್ ವಿತ್ ದಿ ಎಂಡ್ (ಅನುವಾದ), ವುದರಿಂಗ್ ಹೈಟ್ಸ್ (ಅನುವಾದ) ರಾಮಚಂದ್ರ ಉಚ್ಚಿಲ (ಜೀವನ ಚರಿತ್ರೆ) ಹೀಗೆ ಉತ್ತಮ ಕೃತಿಗಳನ್ನು ರಚಿಸಿರುವ ಲೇಖಕಿಯು, ತಮ್ಮ ವ್ಯಕ್ತಿಗತ ಬದುಕು, ಸಾಹಿತ್ಯಕ ಸಾಧನೆಗಳು, ಸಮಾಜದೊಂದಿಗಿನ ಒಡನಾಟ ಇತ್ಯಾದಿ ಆಯಾಮಗಳ ಕುರಿತು ಹೃದಯಂಗಮವಾಗಿ ಈ ಆತ್ಮಕಥನದಲ್ಲಿ ಚಿತ್ರಿಸಿದ್ದಾರೆ.
ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...
READ MORE