ಬೆಸ್ಟ್ ಆಫ್ ಡಾ. ಎಂ. ಆರ್. ರವಿ

Author : ಎಂ.ಆರ್. ರವಿ

Pages 316

₹ 225.00




Year of Publication: 2021
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಕತ್ತರಗುಪ್ಪೆ, ಬೆಂಗಳೂರು

Synopsys

ಡಾ. ಎಂ. ಆರ್. ರವಿ ಅವರು ಬರೆದ ಆತ್ಮಕಥನ-ಬೆಸ್ಟ್ ಆಫ್ ಡಾ. ಎಂ.ಆರ್. ರವಿ. ಸದ್ಯ, ಚಾಮರಾಜನರ ಜಿಲ್ಲಾಧಿಕಾರಿಯಾಗಿರುವ ಲೇಖಕರು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಮ್ಮ ವಿದ್ಯಾಭ್ಯಾಸದೊಂದಿಗೆ ಸುತ್ತಮುತ್ತಲಿನ ವಿದ್ಯಮಾನಗಳನ್ನು ಗ್ರಹಿಸಿದ ರೀತಿ, ಅವುಗಳಿಂದ ಕಲಿತ ಪಾಠಗಳು, ಇತಿಹಾಸ ಹಾಘೂ ಇಂಗ್ಲಿಷ್ ಸಾಹಿತ್ಯದೆಡೆಗಿನ ಒಲವು, ತಂದೆ ವೈದ್ಯರು, ಅಣ್ಣ ಉಪನ್ಯಾಸಕ, ಉತ್ತಮ ಸಂಸ್ಕೃತಿ ಹಿನ್ನೆಲೆಯ ತಾಯಿ ಹೀಗೆ ಆರೋಗ್ಯಕರ ಪರಿಸರದಲ್ಲಿ ಬೆಳೆದ ತಮ್ಮ ಕೌಟುಂಬಿಕ ಹಿನ್ನೆಲೆ, ಈ ಎಲ್ಲದರ ಮೊತ್ತವಾಗಿ ರೂಪುಗೊಂಡ ವ್ಯಕ್ತಿತ್ವ ಹೀಗೆ ತಮ್ಮ ಬದುಕಿನ ವಿವಿಧ ಆಯಾಮಗಳಿಗೆ ಸ್ಪಂದಿಸಿ ಬರೆದ ಬರಹವಿದು. ನಮ್ಮ ನಡೆ-ನುಡಿ-ವ್ಯಕ್ತಿತ್ವಗಳನ್ನು ಕೀಳಾಗಿ ಕಾಣದೇ ಆ ಬಗ್ಗೆ ಹೆಮ್ಮಯಿಂದ ಮುನ್ನಡೆಯಬೇಕು. ಬದುಕನ್ನು ಪ್ರೀತಿಸಬೇಕು ಎಂಬಿತ್ಯಾದಿ ಪ್ರೇರಣಾತ್ಮವಾಗಿ ಚಿಂತನೆಗೆ ಹಚ್ಚುವ ಬರಹವನ್ನು ಈ ಕೃತಿ ಒಳಗೊಂಡಿದೆ. . . 

About the Author

ಎಂ.ಆರ್. ರವಿ

ಡಾ. ಎಂ. ಆರ್. ರವಿ ಅವರು ಸದ್ಯ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದಾರೆ. ‘ಮೈಸೂರು ಮಿತ್ರ’ ಅಂಕಣಕಾರರೂ ಹೌದು. ಈ ಹಿಂದೆ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.    ಕೃತಿಗಳು: ಜೀವನೋತ್ಸಾಹ, ಜೀವನ ಮಂಟಪ, ಜೀವನ ಪ್ರೀತಿ. ಇವರ ಆತ್ಮಕಥೆ-ಬೆಸ್ಟ್ ಆಫ್ ಡಾ. ಎಂ.ಆರ್. ರವಿ. ...

READ MORE

Related Books