ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಕೂರ ಅವರು ತಮ್ಮ ಜೀವನ ಕುರಿತು ಬರೆದ ಆತ್ಮಕಥೆ-ರವೀಂದ್ರನಾಥ ಠಾಕೂರ. ಈ ಕೃತಿಯನ್ನು ಮಹಿಪಾಲ ದೇಸಾಯಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಂಗಾಲ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟವರು. ಕವಿ, ಕಾದಂಬರಿಕಾರ, ಬಂಗಾಳಿಯ ಮಹಾ ವಿದ್ವಾಂಸ, ಸಂಗೀತಕಾರ, ಚಿತ್ರಕಲಾವಿದ ಹೀಗೆ ಬಹುಮುಖೀಯ ವ್ಯಕ್ತಿತ್ವದ ರವೀಂದ್ರನಾಥ ಠಾಕೂರ, ವಿಶ್ವಮಾನವತಾ ಸಂದೇಶವನ್ನು ತಮ್ಮ ಬದುಕಿನ ಹಾಗೂ ಸಾಹಿತ್ಯದ ಮೂಲಕ ರವಾನಿಸಿದವರು. ಭಾರತದ ಸಂಸ್ಕೃತಿ- ಅಧ್ಯಾತ್ಮಿಕ ಶಿಕ್ಷಣ ಕುರಿತು ವಿದೇಶಿಯರಿಗೆ ಮನದಟ್ಟು ಮಾಡಿಕೊಡುವಲ್ಲಿಯೂ ಇವರ ಸಾಹಿತ್ಯ ತುಂಬಾ ನೆರವಾಗಿದೆ. ಬದುಕು-ಬಾಳು-ಜೀವನ ಕುರಿತ ಅವರ ದೃಷ್ಟಿಕೋನವು ತುಂಬಾ ವಿಶಾಲ-ಉದಾರ. ಈ ದೃಷ್ಟಿಕೋನದ ಹಿನ್ನೆಲೆಯಲ್ಲಿ ಮೂಡಿ ಬಂದ ಆತ್ಮಕಥೆಯ ಚಿತ್ರಣ ಇಲ್ಲಿದೆ.
©2025 Book Brahma Private Limited.