ಕನ್ನಡ ರಂಗಭೂಮಿಯ ವಿಶಿಷ್ಟ ನಟಿ ಭಾರ್ಗವಿ ನಾರಾಯಣರ ಆತ್ಮಕಥನ ‘ನಾನು, ಭಾರ್ಗವಿ’. ಈ ಕೃತಿಗೆ ನಟ ಅನಂತ್ ನಾಗ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
"ಇದು ಆತ್ಮಕಥನವೋ, ಕಳೆದ ಐದು ದಶಕಗಳ ಬೆಂಗಳೂರಿನ ಕನ್ನಡ ರಂಗಭೂಮಿಯ ಇತಿಹಾಸವೋ, ಕನ್ನಡ ಕಲಾತ್ಮಕ ಚಿತ್ರಗಳ ಆರಂಭದ ದಿವಸಗಳ ದಿನಚರಿಯೋ, ಮೂರು ದಶಕಗಳಿಗಿಂತ ಅಧಿಕ ಕಾಲ ಸರ್ಕಾರಿ ನೌಕರಿಯ ವ್ಯವಸ್ಥೆಯಲ್ಲಿದ್ದುಕೊಂಡು ನಡೆಸಿದ ಹೋರಾಟವೋ, ರಂಗಭೂಮಿಯ ಮೂಲಕ ಪರಿಚಿತರಾದ ಒಬ್ಬರ ಜತೆ ಒಪ್ಪದೆಯೇ ಒಪ್ಪಿ ಮದುವೆ ಆಗಿ ನಾಲ್ಕು ಮಕ್ಕಳ ತಾಯಿಯಾದವಳ ಜೀವನ ಚರಿತ್ರೆಯೋ ಅಥವಾ ಒಂದು ಹೆಣ್ಣಿನ `ಸರ್ವೇಸಾಮಾನ್ಯ' ಎನಿಸುವ ದುಸ್ತರ ಬಾಳಿನ ವರ್ಣನೆಯೋ... ತೀರ್ಮಾನಿಸುವುದೇ ಕಷ್ಟವಾದೀತು ಓದುಗರಿಗೆ."-ಅನಂತನಾಗ್
ಭಾರ್ಗವಿ ನಾರಾಯಣ ಅವರು ಇಂಗ್ಲಿಷ್ ಎಂ.ಎ. ಪದವಿ ಪಡೆದವರು. ಇ.ಎಸ್.ಐ, ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಾಲಕಲಾವಿದೆಯಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಇವರು ಕಿರುತೆರೆ-ಹಿರಿತೆರೆಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯವನ್ನು ಪ್ರದರ್ಶಿಸಿದ್ದಾರೆ. ಹಲವಾರು ನಾಟಕಗಳನ್ನು ತಾವೇ ರಚಿಸಿ ಆಕಾಶವಾಣಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ಇವರು ಸಹಕಲಾವಿದರಾಗಿ ಅಭಿನಯಿಸಿರುವ ಪ್ರೊ. ಹುಚ್ಚುರಾಯ ಸಿನಿಮಾದ ಅಭಿನಯಕ್ಕೆ 1974 ರಲ್ಲಿ ಅತ್ಯುತ್ತಮ ಪೋಷಕ ನಟಿ ರಾಜ್ಯಪ್ರಶಸ್ತಿ ಸಂದಿದೆ. ಹವ್ಯಾಸಿ ಬರಹಗಾರರಾಗಿರುವ ಇವರು 1998 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯು ಲಭಿಸಿದೆ. 'ಕವಲೊಡೆದ ದಾರಿ' ಭಾಗ-2 ಧಾರಾವಾಹಿಗೆ ಅವರು ರಚಿಸಿದ ಕತೆ ...
READ MORE