ಸೋಲೋಮನ್ ನಾರ್ಥಪ್ ಅವರು ಇಂಗ್ಲಿಷಿನಲ್ಲಿ(12 years a slave) ಬರೆದ ಆತ್ಮಕಥನವನ್ನು ಡಾ., ಮುಕೇಶಕುಮಾರ ಅವರು ಹಿಂದಿಯಲ್ಲಿ ತದನಂತರ ಖ್ಯಾತ ಸಾಹಿತಿ ಡಾ. ಡಿ.ಎನ್. ಶ್ರೀನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದೇ- ಗುಲಾಮಗಿರಿಯ ಆ ಹನ್ನೆರಡು ವರ್ಷಗಳು. ಅಮೇರಿಕದಲ್ಲಿ ಸರಿಸುಮಾರು 150 ವರ್ಷಗಳ ಹಿಂದೆ ಗುಲಾಮಗಿರಿ ಪದ್ಧತಿ ಜೀವಂತವಿತ್ತು. ಮನುಷ್ಯರನ್ನೇ ಗುಲಾಮರಾಗಿಸಿಕೊಂಡು ಅವರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡಿಕೊಳ್ಳಲಾಗಿತ್ತು. ಇಂತಹ ಕೆಟ್ಟ ಸನ್ನಿವೇಶಕ್ಕೆ ಸುಮಾರು 12 ವರ್ಷ ಕಾಲ ನರಕ ಯಾತನೆ ಅನುಭವಿಸಿದ ಸಾಲೋಮನ್ ನಾರ್ಥಪ್ ಅವರ ಕಾದಂಬರಿ ರೂಪದ ಈ ಆತ್ಮಕಥನವೇ ಈ ಕೃತಿ. ಮನುಷ್ಯನ ಕ್ರೌರ್ಯದ ಅನಾವರಣವೂ ಇಲ್ಲಿದೆ.
ಅನುವಾದಕ ಶ್ರೀನಾಥ್ ಅವರು ಹುಟ್ಟಿದ್ದು 1950 ಡಿಸೆಂಬರ್ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ" ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...
READ MORE