‘ಇದನ್ನ ಓದ್ಬೇಡಿ’ ನಟ, ನಿರ್ದೇಶಕ ಉಪೇಂದ್ರ ಅವರ ಕೃತಿ. ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಮುದ್ರಣ ಕಂಡಿದೆ. ಚಿತ್ರರಂಗದ ಅನುಭವಗಳನ್ನು ಒಂದೆಡೆ ಸೇರಿಸಿ ತಮ್ಮದೇ ಶೈಲಿಯಲ್ಲಿ ಉಪೇಂದ್ರ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಸದಾ ತಮ್ಮದೇ ಕ್ರಿಯಾಶೀಲ ಆಲೋಚನೆಗಳಿಂದ ಬೆರಗುಗೊಳಿಸುವ ಉಪೇಂದ್ರ ತಮ್ಮ ಕೃತಿಗೂ ವಿಚಿತ್ರವಾದ ಶೀರ್ಷಿಕೆ ಇಟ್ಟಿದ್ದಾರೆ. ಕುತೂಹಕರವಾದ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಿದ್ದಾರೆ.
ಉಪೇಂದ್ರ ಅವರು ಚಲನಚಿತ್ರ ನಿರ್ದೇಶಕ ಹಾಗೂ ನಟ. ಕುಂದಾಪುರ ಸಮೀಪದ ಕೋಟೇಶ್ವರದಲ್ಲಿ ಜನಿಸಿದರು. 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದು, ಅದಕ್ಕೂ ಮುಂಚೆ ನಟ ನಿರ್ದೇಶಕ ಕಾಶೀನಾಥ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಷಯ ಓದುತ್ತಿರುವಾಗಲೇ ಚಲನಚಿತ್ರ ನಿರ್ದೇಶನದ ಗೀಳನ್ನು ಅಂಟಿಸಿಕೊಂಡು, ನಿರ್ದೇಶಕ 'ಕಾಶಿನಾಥ' ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು. ಆನಂತರ, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಬೆಳೆದ ಉಪೇಂದ್ರ, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ‘ಇದನ್ನ ಓದ್ಬೇಡಿ’ ಅವರ ಮೊದಲ ಕೃತಿ. ...
READ MORE