ಬೀchi ತಮ್ಮ ಆತ್ಮಕತೆ ’ನನ್ನ ಭಯಾಗ್ರಫಿ’ ಬರೆದದ್ದು ೧೯೭೪ರಲ್ಲಿ. ಸಾಹಿತಿ ಶ್ರೀರಂಗರಂತೆ ಆತ್ಮಕತೆಯಲ್ಲಿ ಇವರದೂ ಹಾಸ್ಯ ಶೈಲಿ.”ಹುಟ್ಟುತ್ತಲೇ ತಂದೆಯನ್ನು ನೀಗಿದ’ ಎಂಬ ಶಾಪ ಬಾಲಕ ಬೀchiಗೆ ಅಂಟಿಕೊಂಡಿತ್ತು. ಈ ಗಾಯ ಮಾಯಲು ಹಲವು ವರ್ಷಗಳೇ ಬೇಕಾದವು. ಬಾಲ್ಯದಲ್ಲಿಯೇ ಅವರು ದುಶ್ಚಟಗಳಿಗೆ ದಾಸರಾಗಿದ್ದು ಕೂಡ ಇಂತಹ ಕಾರಣಗಳಿಂದಲೇ ಎಂದು ತೋರುತ್ತದೆ.
ತಾವು ಪೊಲೀಸ್ ಇಲಾಖೆಗೆ ಸೇರಿದ್ದು, ಅಲ್ಲಿಂದ ಬೆಂಗಳೂರಿಗೆ ವರ್ಗವಾಗಿದ್ದು, ಅ.ನ.ಕೃ ಅವರಂತಹ ಸಾಹಿತ್ಯ ದಿಗ್ಗಜರ ಸ್ನೇಹ ಲಭಿಸಿದ್ದು, ಸಾಂಸಾರಿಕ ಸಂಗತಿಗಳು, ನಿವೃತ್ತಿ ಮತ್ತಿತರ ವಿಚಾರಗಳ ಬಗ್ಗೆ ಪ್ರಸ್ತಾಪವಿದೆ. ಆ ಎಲ್ಲ ಅಂಶಗಳಿಗೂ ಬೀchiತನದ ಸ್ಪರ್ಶ ಇದೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE