ಲೇಖಕ ಡಾ. ಎಲ್. ಹನುಮಂತಯ್ಯ ಅವರ ಆತ್ಮಕಥನ ಭಾಗ-1-ಒಂಟಿ ಕಾಲಿನ ನಡಿಗೆ. ದಲಿತ ಚಳವಳಿ ಹಾಗೂ ರಾಜಕಾರಣದಲ್ಲಿ ಸಕ್ರಿಯರಾದ ಲೇಖಕರು ಕವಿಗಳೂ ಹೌದು. ತಮ್ಮ ಹೈಸ್ಕೂಲ್ ಶಿಕ್ಷಣ, ಪದವಿ ಶಿಕ್ಷಣದ ಜೊತೆಗೆ ದಲಿತ ಚಳವಳಿಯಲ್ಲಿ ಧುಮುಕಿದ ಬಗೆಯನ್ನು ಚಿತ್ರಿಸಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯರಾಗಿದ್ದರ ವಿವರಣೆ ಇದೆ. ತಮ್ಮ ಚಿಂತಿಸುವ ಯೋಚನಾಲಹರಿ ವಿಶೇಷತೆಯನ್ನು ಉಲ್ಲೇಖಿಸಿದ್ದಾರೆ. ಸ್ನೇಹಿತರು ಮತ್ತವರ ಕುಟುಂಬಗಳ ಪರಿಚಯ, ಒಂದು ಬ್ರಾಹ್ಮಣ ಕುಟುಂಬಕ್ಕೆ ಹತ್ತಿರದವರಾದ ಬಗ್ನಾಗೆ, ದಲಿತ ಸಮುದಾಯ ಯೋಚಿಸುವ ಅನೇಕ ವಿಚಾರಗಳು ಬ್ರಾಹ್ಮಣರು ಚಿಂತಿಸುವ, ಅವರ ಮನೆಯಲ್ಲಿ ನಡೆದುಕೊಳ್ಳುವ ನಡವಳಿಕೆಗಳಿಗಿಂತ ತುಂಬಾ ವಿಭಿನ್ನವಾಗಿದ್ದವು. ಹೀಗೂ ಇರಲು ಸಾಧ್ಯವೇ ಎಂದು ಯೋಚಿಸುತ್ತಾರೆ. ಪದವಿ ಮುಗಿಸಿ ಬ್ಯಾಂಕ್ ಉದ್ಯೋಗಕ್ಕೆ ಸೇರಿದ್ದು, ಬ್ರಾಹ್ಮಣರ ಒಡನಾಟ ಇದ್ದಿದ್ದು, ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಬ್ರಾಹ್ಮಣರ ಕೈಯಲ್ಲಿದ್ದರ ಬಗ್ಗೆ ಚರ್ಚೆ ಇದೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಮಾತು, ನಡೆ, ಹೋರಾಟಗಳೂ ಚರ್ಚೆಯ ವಿಷಯಗಳಾಗಿದ್ದವು. ಹೀಗೆ ತಾವು ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತಾ ಬಂದ ವಿಚಾರ-ಒಡನಾಟಗಳು ತತ್ವ-ಸಿದ್ಧಾಂತಗಳು ತಮ್ಮ ಆತ್ಮಕಥನದ ಬಹುಭಾಗವನ್ನು ಆವರಿಸಿವೆ.
©2024 Book Brahma Private Limited.