ತಮ್ಮ 21ನೇ ವಯಸ್ಸಿನಲ್ಲಿ ವಯೋಸಹಜವಾಗಿ ಮೂಡುವ ಭಾವನೆ-ವಿಚಾರಗಳಿಗೆ ಇಲ್ಲಿ ಅಕ್ಷರ ರೂಪು ನೀಡಿ ಆತ್ಮ ಚರಿತ್ರೆಯ ಮೊದಲ ಭಾಗವಾಗಿ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಕೃತಿ-ಗೋವಾ ನನ್ನ ತವರು ಮನೆ. ತಮ್ಮೆದೆಯ ದುಗುಡದ ಭಾವನೆಯನ್ನು ಇಳಿಸಿಕೊಳ್ಳುವ ತವಕದೊಂದಿಗೆ ಆತ್ಮಕತೆ ಬರೆದಿದ್ದಾಗಿ ಲೇಖಕರು ಹೇಳಿಕೊಂಡಿದ್ದಾರೆ.
ನಿನ್ನ ಬಾಳಿಗೆ ನೀನೇ ಶಿಲ್ಪಿ, ನನ್ನ ವಿಡಂಬನೆ, ನನ್ನ ಸಾಹಿತ್ಯ ಪ್ರಪಂಚ, ಸಾಹಿತ್ಯ ಹುಚ್ಚನೋ ನಾನೂ ಹುಚ್ಚನೋ, ಸತ್ತ ಕೋಳಿಯ ಗೋಣು ತಿಂದು, ಬಿಟ್ಟ ಚಹಾ ಮತ್ತೆ ಕುಡಿದಿದ್ದು, ನನ್ನನ್ನು ನಾನೇ ಅರಿಯದಾದೆ ಹೀಗೆ ವಿವಿಧ ಅಧ್ಯಾಯಗಳಡಿ ತಮ್ಮ ಅನುಭವದ ಮೂಸೆಯಿಂದ ಮೂಡಿದ ಚಿಂತನೆಗಳನ್ನು ಆತ್ಮಕತೆಯ ರೂಪದಲ್ಲಿ ಬರೆಹಕ್ಕಿಳಿಸಿದ್ದಾರೆ. 1991 ರಲ್ಲಿ ಈ ಕೃತಿಯ ಮೊದಲ ಆವೃತ್ತಿ ಪ್ರಕಟವಾಗಿತ್ತು.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE