ಮಹಾತ್ಮಗಾಂಧೀ ಅವರ ಆತ್ಮಕಥೆ. ಇದರಲ್ಲಿ 44 ಅಧ್ಯಾಯಗಳಿವೆ. ಇವುಗಳನ್ನು 5 ಭಾಗಗಳಾಗಿ ವಿಂಗಡಿಸಲಾಗಿದೆ. ಗಾಂಧೀಜಿಯವರ ಜೀವನ ಅರಿಯಲು ಇದು ಒಳ್ಳೆಯ ಕೃತಿ. ಅವರ ಹುಟ್ಟು ಬಾಲ್ಯ, ವಿದ್ಯಾಭ್ಯಾಸದಿಂದ ಹಿಡಿದು ಅವರು ನಡೆಸಿದ ಹಲವಾರು ಹೋರಾಟಗಳು ಮತ್ತು ಅವರ ಅನುಭವಗಳೆಲ್ಲವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇಂತಹ ಮಹತ್ವದ ಕೃತಿಯನ್ನು ಗೋರೂರು ಅವರು ಕನ್ನಡಕ್ಕೆ ತರುವುದರ ಮೂಲಕ ಕನ್ನಡದ ಓದುಗರಿಗೆ ಒಂದು ಮಹತ್ವದ ಜ್ಞಾನವನ್ನು ಉಣಬಡಿಸಿದ್ದಾರೆ ಎನ್ನಬುಹುದು. ಈ ಕೃತಿಯನ್ನು ಗಾಂಧೀಜಿಯವರು 1925 ರಲ್ಲಿಯೇ ರಚಿಸಿರುವುದರಿಂದ ಇದು ಅವರ ಜೀವನದ ಸಂಪೂರ್ಣ ಕಥೆಯನ್ನು ಒಳಗೊಂಡಿಲ್ಲ ಇದನ್ನು ಗಾಂಧೀಜಿಯವರು ಈ ರೀತಿ ಹೇಳಿದ್ದಾರೆ. "ನಿಜವಾದ ಕಥೆಯನ್ನು ಪ್ರಾರಂಭಿಸುವುದು ಮುಂದಿನ ಅಧ್ಯಾಯದಲ್ಲಿ ಮಾತ್ರ ನನಗೆ ಸಾಧ್ಯ". ಎಂದು ಹೇಳಿದ್ದಾರೆ. ಅದು ಸಾಧ್ಯವಾಗಲೇ ಇಲ್ಲ.
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE