ಚಿತ್ರದುರ್ಗ ಜಿಲ್ಲೆಯ ಜನಪದ ಕಥೆಗಾರರಲ್ಲಿ ಖ್ಯಾತರಾದ ಈರಬಡಪ್ಪನವರ ಕಥನ ಸಂಪತ್ತು ಆತ್ಮಕಥಾ ರೂಪದಲ್ಲಿ ಲೇಖಕ ಮಲ್ಲಿಕಾರ್ಜುನ ಕಲಮರಹಳ್ಳಿ ಯವರು ವಿವರಿಸಿದ್ದಾರೆ. ಈರಬಡಪ್ಪನವರ ಧ್ವನಿಯಲ್ಲೇ, ಅವರ ಗ್ರಾಮೀಣ ಜನಪದ ಸೊಗಡಿನಲ್ಲಿ ಅವರ ಜೀವನ ಕಥೆ ಮತ್ತು ಅವರು ಹೇಳುವ ಕೆಲವು ಪ್ರಾತಿನಿಧಿಕ ಕತೆಗಳು ಓದುಗರಿಗೆ ಹೊಸತರದ ಓದನ್ನು ಪರಿಚಯಿಸುತ್ತದೆ. ಜನಪದ ಕಥಾ ಸರಣಿಯನ್ನು ಎಲ್ಲೂ ಹೆಚ್ಚು ಭಂಗಗೊಳಿಸಲು ಇಷ್ಟಪಡದೆ ಕೇವಲ ನಿರೂಪಣಾ ಕಾರ್ಯವನ್ನು ಮಾತ್ರವೇ ಅಚ್ಚುಕಟ್ಟಾಗಿ ನಿಭಾಯಿಸಿ ಕೃತಿಗೆ ಜೀವಂತಿಕೆಯನ್ನು ಲೇಖಕರು ತಂದುಕೊಟ್ಟಿದ್ದಾರೆ.
ಮಲ್ಲಿಕಾರ್ಜುನ ಕಲಮರಹಳ್ಳಿಯವರು ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ 1958 ಮೇ 05 ರಂದು ಜನಿಸಿದರು. ಕನ್ನಡದ ನೆಲಮೂಲ ಸಂಸ್ಕೃತಿಯ ಪ್ರತೀಕವಾದ ಕಾಡುಗೊಲ್ಲ ಸಮುದಾಯದಲ್ಲಿ ಜನಿಸಿದ ಅವರು ಬಾಲ್ಯದಿಂದಲು ಜನಪದ ಸೊಗಡನ್ನು ಮೈಗೂಡಿಸಿಕೊಂಡವರು. ಹೀಗಾಗಿ ಇವರಿಗೆ ಜನಪದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದೊಂದಿಗೆ ಕರುಳು ಬಳ್ಳಿಯ ನಂಟಿದೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಾನಪದ ವಿದ್ವಾಂಸರಾದ ಜಿ. ಶಂ. ಪರಮಶಿವಯ್ಯ ಅವರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡ ಸಂಪ್ರಬಂಧವು ‘ಕಲಮರಹಳ್ಳಿಯ ಕಥೆಗಳು’ ಎಂಬ ಪುಸ್ತಕ ರೂಪವನ್ನು ಪಡೆದುಕೊಂಡಿತು. 1986 ರಲ್ಲಿ ಈ ಕೃತಿಗೆ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ಯು ...
READ MORE