ಲೇಖಕ ಎಂ. ಮರಿಯಪ್ಪ ಭಟ್ಟ ಅವರ ಕೃತಿ ʼಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆʼ. ಇದು ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಗ್ರಂಥಮಾಲೆಯಲಲಿ ಪ್ರಕಟಗೊಂಡಿದೆ. ಕನ್ನಡ ಭಾಷೆಯ ಸಾಹಿತ್ಯದ ಹುಟ್ಟು, ಬೆಳವಣಿಗೆ ಹಾಗೂ ಇತಿಹಾಸದ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಕನ್ನಡ ಭಾಷೆಯ ಇತಿಹಾಸ, ಕವಿರಾಜ ಮಾರ್ಗ ೯ನೆಯ ಶತಮಾನ, ಪೂರ್ವದ ಹಳೆಗನ್ನಡ- ಗದ್ಯ ಸಾಹಿತ್ಯ, ಚಂಪೂ ಕಾವ್ಯಗಳು, ಇತರ ಚಂಪೂ ರಚನಕಾರರು, ಶಾಸನ ಸಾಹಿತ್ಯ, ಶತಕ ಸಾಹಿತ್ಯ, ಲಕ್ಷ್ಮಣ ಸಾಶ್ತ್ರಗಳು, ಶಾಸ್ತ್ರೀಯ ಸಾಹಿತ್ಯ, ನಡುಗನ್ನಡ ಸಾಹಿತ್ಯ, ನಡುಗನ್ನಡ ಮಹಾಕವಿಗಳು, ಹರಿದಾಸ ಸಾಹಿತ್ಯ, ಜಾನಪದ ವಾಙ್ಮಯ, ಹಾಗೂ ಹೊಸಗನ್ನಡ ಸಾಹಿತ್ಯ ಹೀಗೆ ಒಟ್ಟು ೧೩ ಶೀರ್ಷಿಕೆಗಳಲ್ಲಿ ವಿಚಾರಗಳನ್ನು ಹೇಳಲಾಗಿದೆ.
©2024 Book Brahma Private Limited.