ಸಾತತ್ಯ

Author : ಸುಂಕಂ ಗೋವರ್ಧನ

Pages 22

₹ 600.00




Year of Publication: 2022
Published by: ಇತಿಹಾಸ ದರ್ಪಣ ಪ್ರಕಾಶನ
Address: #22/ಎ, ಐ.ಟಿ.ಐ. ಕಾಲೇಜು ಹತ್ತಿರ, ಕೆಂಪೇಗೌಡನಗರ, ವಿಶ್ವನೀಡಂ- ಅಂಚೆ, ಬೆಂಗಳೂರು-560091hd
Phone: 7829404063

Synopsys

ಕರ್ನಾಟಕ ಶಾಸನಾಧ್ಯಯನ ವಾಗ್ವಾದಗಳನ್ನು ಕನ್ನಡ ಸಂಶೋಧನೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆದಷ್ಟೂ ಸಮಗ್ರವಾಗಿ ಕಟ್ಟಿಕೊಟ್ಟಿರುವ ಕೃತಿಯಿದು. ಇದು ಸಂಶೋಧನ ಮಹಾಪ್ರಬಂಧವಾಗಿದೆ. ಇದುವರೆಗೆ ಕರ್ನಾಟಕದ ಶಾಸನಗಳ ಬಗ್ಗೆ ನಡೆದಿರುವ ಎಲ್ಲಾ ಮುಖ್ಯವಾದ ವಾಗ್ವಾದಗಳನ್ನು ಈ ಕೃತಿ ವಿಮರ್ಶಾತ್ಮಕವಾಗಿ ಗುರುತಿಸುತ್ತದೆ. ಕನ್ನಡ ಸಂಶೋಧನೆಯ ಬಹುಮುಖ್ಯ ಆಸಕ್ತಿಗಳೇನು ಎಂದು ಈ ಕೃತಿಯ ಮೂಲಕ ಕಂಡುಕೊಳ್ಳಲಾಗಿದೆ. ಅರಸುಮನೆತನಗಳ ಮೂಲಚೂಲ, ಭಾಷೆ ಮತ್ತು ಅರ್ಥ, ಸ್ಥಳ ಮತ್ತು ಸ್ಥಳನಾಮ, ವ್ಯಕ್ತಿ ಮತ್ತು ಸಂಬಂಧಗಳು, ಕಾಲ ಮತ್ತು ಕಾರಣ ಎಂಬ ಅಧ್ಯಾಯಗಳಲ್ಲಿ ಕನ್ನಡ ಸಂಶೋಧನ ಪ್ರಪಂಚವು ತಳೆದಿರುವ ನಿಲುವುಗಳನ್ನು ಸಂಶೋಧನಾ ಸಾತತ್ಯವನ್ನು, ಅಧ್ಯಯನದ ಕ್ರಮಗಳನ್ನು ಇಲ್ಲಿ ಮುನ್ನೆಲೆಗೆ ತರುವಂತೆ ಸಂಶೋಧನೆಯನ್ನು ಮಾಡಲಾಗಿದೆ.

About the Author

ಸುಂಕಂ ಗೋವರ್ಧನ

ಲೇಖಕ ಸುಂಕಂ ಗೋವರ್ಧನ ಮೂಲತಃ ಬೆಂಗಳೂರಿನವರು. ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬಿ.ಎಂ.ಶ್ರೀ ಪ್ರತಿಷ್ಟಾನದಿಂದ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೊಮಾ ಪದವೀಧರರು.   ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ಇವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಇತಿಹಾಸ ಮತ್ತು ಪುರಾತತ್ವ ಸಮಾವೇಶ, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶ ಸೇರಿದಂತೆ ಇತರೆಡೆ ಸುಮಾರು 30ಕ್ಕೂ ಹೆಚ್ಚಿನ ಬಂಧಗಳನ್ನು ಮಂಡಿಸಿದ್ದಾರೆ. ಸಾಹಿತ್ಯಕ ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಇತಿಹಾಸ ದರ್ಪಣ ...

READ MORE

Related Books