ಋಣದ ಗಣಿ ರುದ್ರಪ್ಪ ಹನಗವಾಡಿ ಅವರು ರಚಿಸಿರುವ ಆತ್ಮಕಥನವಾಗಿದೆ. ಸಾಧನೆಯೆಂಬುದು ಸವಲತ್ತುಗಳಿಂದ ವಂಚಿತವಾದ ಸವಾಲುಗಳ ದತ್ತವಾಗುತ್ತದೆ, ಸಾಧನೆಯ ನಂತರದ ಸಿರಿಯಲ್ಲಿ ಬದುಕು ಸ್ವಾರ್ಥ ಹಂಜಿತವಾಗದೆ ಪರಾರ್ಥಮುಖಿಯಾದಾಗ ಅದಕ್ಕೊಂದು ಘನತೆ ಬರುತ್ತದೆ. ಅಕ್ಷರ ವಂಚಿತ ಸಮುದಾಯದಿಂದ 'ಅಕ್ಷರ' ಜಗತ್ತಿಗೆ ತೆರೆದುಕೊಂಡ ದಲಿತ ಮೂಲದ ಮೊದಲ ಪೀಳಿಗೆಯವರ ಅನುಭವ ಕಥನವೆಂದರೆ ಇದು ಕೇವಲ ವ್ಯಕ್ತಿಯ ಆತ್ಮಕಥನ ಮಾತ್ರವಾಗದೆ ಶ್ರೇಣೀಕರಣ ಸಮಾಜದ ಸಂಘರ್ಷಮುಖೀ ಬದುಕಿನ ಚಿತ್ರಣವಾಗುತ್ತದೆ. ಇಂಥ ಅವಮಾನಿತ ನೆಲೆಯ ನೈತಿಕ ಸಿಟ್ಟು ಸಹಜ ಗುಣವಾಗಿ ಮಾತನಾಡುತ್ತದೆ. ಇದು ಇದುವರೆಗೆ ಬಂದಿರುವ ದಲಿತ ಲೋಕದ ಅನುಭವ ಕಥನಗಳ ಸಹಜ ಮಾದರಿ: ಆದರೆ ಮಿತ್ತರಾದ ರುದ್ರಪ್ಪ ಹನಗವಾಡಿ ಇದರ ಆತ್ಮಕಥನ ಇವೆಲ್ಲಕ್ಕಿಂತ ಅನ್ನ ದನಿಯಲ್ಲಿ ಹಲವಿದೆ. ಇದಕ್ಕೆ ಕಾರಣವನ್ನು ಹನಗವಾಡಿಯ ಸಾಮಾಜಿಕ ಬದುಕಿನಲ್ಲ ಕಾಣಬಹುದು, ಜಾತಿ ಕಟ್ಟುಗಳ ನಡುವೆಯೂ ಸಹಜೀವನದ ಭಾವ ಬಾವುಣಿಕೆಯನ್ನು ಉಣಬಡಿಸಿದ ಚಿನ್ನ ಬಗೆಯ ಸಮಾಜವದು. ಹೀಗಾಗಿ ರುದ್ರಪ್ಪ ಇವರಲ್ಲಿ ಒಳಗೊಳ್ಳುವ ಉದಾರತೆ ಸಹಣಗುಣವಾಗಿದೆ. ಸಿಂತ ಸಮಾಧಾನದ ಸಹಯೋಗದಲ್ಲಿ ಅನುಭವಗಳನ್ನು ನಿರೀಕ್ಷಿಸುವ ಈ ಪ್ರಜ್ಞೆಯಲ್ಲಿ ಬುದ್ಧತತ್ವದ ಬೆಳಕಿದೆ.ಎಂದು ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.