ಒಂದು ಪುಟದ ಕಥೆ : ವಿ.ಸ. ಖಾಂಡೇಕರ ಆತ್ಮಕಥನವು ಖಾಂಡೇಕರ್ ವಿ ಎಸ್ ಅವರ ಕೃತಿಯಾಗಿದೆ. ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಗುರುಲಿಂಗ ಕಾಪಸೆ ಅನುವಾದಿಸಿದ್ದಾರೆ. ಒಂದು ತಲೆಮಾರಿನ ಕೊಂಕಣದ ಜನಜೀವನದ ಸ್ಥಿತಿ-ಗತಿಗಳನ್ನು ಚಿತ್ರಿಸುತ್ತಲೇ ತಮ್ಮ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು ಅಲ್ಲಲ್ಲಿ ಕಣ್ಣುಹನಿಗೂಡುವಂತೆ ಖಾಂಡೇಕರರು ವಿವರಿಸಿದ್ದಾರೆ. ಅವರು ಆಗಿನ ಜನಾಂಗದಲ್ಲಿರುವ ವರ್ಗ, ವರ್ಣ ವೈಷಮ್ಯ, ಲಿಂಗತಾರತಮ್ಯ ಇತ್ಯಾದಿಗಳನ್ನು ಗಮನಿಸಿದ್ದಾರೆ. ಆತ್ಮಕಥೆ ವಾಸ್ತವತೆಯ ನೆಲೆಗಟ್ಟಿನ ಮೇಲೆ ನಿಂತಿದ್ದರೂ ಕವಿ ಹೃದಯ, ಕಾದಂಬರಿಕಾರನ ಕಥನ ಕೌಶಲ, ಸಮಾಜ ಸುಧಾರಕನ ಚಿಂತನಶೀಲತೆ-ಇವು ಬರವಣಿಗೆಗೆ ಪೋಷಕ ಸಾಮಗ್ರಿಯಾಗಿ ನಿಂತಿವೆ. ಒಟ್ಟಂದದಲ್ಲಿ ಆತ್ಮಕಥನ ಸಾಹಿತ್ಯದಲ್ಲಿ ಇದೊಂದು ಅಪರೂಪದ ಕೃತಿ.
©2024 Book Brahma Private Limited.