ಎಚ್.ಎಸ್. ದೊರೆಸ್ವಾಮಿ ಅವರು ಸ್ವಾತಂತ್ಯ್ರಯೋಧರು. ಹತ್ತು ಹಲವು ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು. ಅನ್ಯಾಯಕ್ಕೆ ಪ್ರತಿಭಟನೆಯೇ ಮೊದಲ ಅಸ್ತ್ರ ಎಂಬುದು ಅವರ ನಿಲುವು. ತಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ ಬಂದು, ಶೋಷಣೆಯನ್ನು ವಿರೋಧಿಸುವ ಮೂಲಕ ಹೋರಾಟಗಾರರಿಗೆ ಮಾದರಿಯಾದವರು. ಅವರು ತಮ್ಮ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿ ವಿಶ್ಲೇಷಿಸಿದ ಬರೆಹವಿದು.
ಹೊಸತು-2004- ಮಾರ್ಚ್
ಸರಳ ಜೀವನವನ್ನು ಆಯ್ದುಕೊಂಡ ಹಿರಿಯ ಗಾಂಧೀವಾದಿ ಶ್ರೀ ಎಚ್. ಎಸ್. ದೊರೆಸ್ವಾಮಿ ಸೇವಾ ಮನೋಭಾವನೆಯ ನಿಸ್ವಾರ್ಥ ವ್ಯಕ್ತಿ, ಕ್ಷುದ್ರ ರಾಜಕಾರಣ – ಅಧಿಕಾರ ಲಾಲಸೆಯನ್ನು ಹತ್ತಿರವೂ ಸುಳಿಯದಂತೆ ದೂರಕ್ಕಟ್ಟಿದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಹಣವನ್ನು ಕೈಬಿಟ್ಟು ನಿರ್ಮಲ ಚಾರಿತ್ರ್ಯವನ್ನು ಗಳಿಸಿದವರು. ಬಾಲ್ಯದಿಂದಲೂ ನಡೆದ ಅನೇಕ ಘಟನೆಗಳಲ್ಲಿ ಸ್ಮರಿಸುತ್ತಾ ಹೋರಾಟ ಚಳುವಳಿಗಳಲ್ಲಿ ತಾವು ಸಾಗಿಬಂದ ರೀತಿಯನ್ನೂ ತಮ್ಮ ಒಡನಾಡಿ ಗಳನ್ನೂ ಪರಿಚಯಿಸಿದ್ದಾರೆ. ಸರಳತೆ, ಸಜ್ಜನಿಕೆ ಮತ್ತು ಆದರ್ಶದ ಪಾಠವೇ ಇಲ್ಲಿದೆ.
©2024 Book Brahma Private Limited.