‘ನಮ್ಮ ಜಲ ಸಂಪನ್ಮೂಲಗಳು ಡಾ.ರಾಮು ಅವರ ಕೃತಿಯನ್ನು ಟಿ.ಆರ್. ಅನಂತರಾಮು ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮ ದೇಶದ ಜಲ ಸಂಪನ್ಮೂಲ ಮಳೆಯ ಪ್ರಮಾಣವನ್ನು ಆಧರಿಸಿದೆ. ಮಳೆಯ ಪ್ರಮಾಣ ಸಾಕಷ್ಟಿದ್ದರೂ ಅದು ಎಲ್ಲೆಡೆಗಳಲ್ಲೂ ಸಮನಾಗಿ ಬೀಳುವುದಿಲ್ಲ ಮತ್ತು ಸಕಾಲಿಕವಾಗಿಲ್ಲ. ಇದರಿಂದಾಗಿ ನೀರಿನ ನಿಯಂತ್ರಣ, ಶೇಖರಣೆ ಹಾಗೂ ವಿತರಣೆಗಳಿಗೆ ಬೃಹತ್ ಯೋಜನೆಗಳ ಅವಶ್ಯಕತೆ ಇದೆ. ಜಲ ಸಂಪನ್ಮೂಲಗಳ ಬಗ್ಗೆ ವಿವರಣೆ ನೀಡುವ ಈ ಪುಸ್ತಕ ಸಾಮಾನ್ಯ ಓದುಗರಿಗೆ ಈ ಸಮಸ್ಯೆ ಮತ್ತು ಅದರ ನಿವಾರಣೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ತಿಳುವಳಿಕೆ ನೀಡುತ್ತದೆ.
ಪುಸ್ತಕದ ಲೇಖಕ ಡಾ. ರಾಮ, ನಮ್ಮ ದೇಶಕ್ಕೆ ಸರಿ ಹೊಂದುವ ಅಂತರ್ಜಲ ಭಂಡಾರಗಳನ್ನು ಸೃಷ್ಟಿಸುವ ಬಗ್ಗೆ ಮೂಲ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾಸ್ಮಿಕ್ ಕಿರಣಗಳ ಪರಸ್ಪರ ಕ್ರಿಯೆ ಮತ್ತು ಭೂಮಿಯ ಕಾಲಶಾಸ್ತ ಅವರ ವಿಶೇಷ ಅಧ್ಯಯನವಾಗಿದೆ. ಪವನಶಾಸ್ತ್ರ, ಸಾಗರಶಾಸ್ತ್ರ ಮತ್ತು ಜಲಶಾಸ್ತ್ರಗಳಲ್ಲಿ ವಿಕಿರಣ ಕ್ರಿಯೆಯ ಕುರುಹುಗಳ ಆನ್ವಯಿಕ ಅಧ್ಯಯನವನ್ನು ಕೈಗೊಂಡಿದ್ದಾರೆ.
©2024 Book Brahma Private Limited.