ಈ ಕೃತಿಯು ಶಿರೋನಾಮೆಯಿಂದ ಸಣ್ಣರಾಮ ಅವರ ಆತ್ಮ ಚರಿತ್ರೆ ಎಂದರೂ ಕೃತಿಯ ಒಳಗೊಂದು ಸಮುದಾಯದ ಕತೆ ತೆರೆದುಕೊಳ್ಳುತ್ತದೆ. ಆಧುನಿಕ ಸಮಾಜ ವಿಧದ ಒತ್ತಡವನ್ನು ಲೇಖಕರು ಎದುರಿಸಿದ, ಸಂಸ್ಕೃತಿಯ ವಿಭಜನೆಯ ಕುರಿತು, ಒಂಟಿತನ ನೀಗಲು ಹೊಸದಾದ ತೀವ್ರತೆಯ ಹುಡುಕಾಟವನ್ನು, ತಮ್ಮ ನಿತ್ಯ ಬದುಕಿನ ಜಂಜಡ, ಖಿನ್ನತೆ ಆಂದೋಲನವನ್ನು ಪ್ರಥಮ ವಾಚಕದಲ್ಲಿ ನಿರೂಪಿಸಿದ್ದಾರೆ. ಇತ್ತ ಪೂರ್ಣ ನಾಗರಿಕರೂ ಅಲ್ಲದೆ ಅತ್ತ ಪೂರ್ಣ ಅಲೆಮಾರಿಗಳೂ ಅಲ್ಲದೆ ಲಂಬಾಣಿಗಳ ಬದುಕಿನ ವಾಸ್ತವ ಸ್ಥಿತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ.
ಸ್ವಾನುಭವನದ ಕಥನದಲ್ಲಿ ಸಮುದಾಯಕ ಚಿತ್ರ-ಜಯರಾಮ ಕಾರಂತ-ಉದಯವಾಣಿ
ತನ್ನ ಸುತ್ತ ಮುತ್ತಲ ಪರಿಸರದಲ್ಲಿ ನಡೆದಂತಹ ಪ್ರಕರಣಗಳನ್ನು ಸಾಹಿತ್ಯಿಕವಾಗಿ, ಅಲ್ಲದೆ ಜನರ ಭಾವಕ್ಕೆ ತಾಕುವಂತೆ ಕಟ್ಟಿಕೊಡುವುದು ಆತ್ಮಕಥೆ ಹಾಗೂ ಕಾದಂಬರಿಗಳಲ್ಲಿನ ಒಂದು ಕಥಾ ಶೈಲಿ. ಪ್ರೊ.ಸಣ್ಣರಾಮ ತಮ್ಮ ‘ನಾನೆಂಬುದು ನಾನಲ್ಲ’ ಎಂಬ ಆತ್ಮಕಥನದಲ್ಲಿ ಲಂಬಾಣಿ ಸಮುದಾಯದ ಕುರಿತು ಅವರು ಅನುಭವಿಸುತ್ತಿರುವ ಸಮಸ್ಯೆಗಳು, ಎದುರಿಸುತ್ತಿರುವ ಸವಾಲುಗಳನ್ನು ಕಟ್ಟಿಕೊಟ್ಟಿದ್ದಾರೆ. ಲೇಖಕರು ‘ಈ ಕೃತಿಯು ನನ್ನ ಆತ್ಮಚರಿತೆಯಾದರೂ, ಇದು ಒಂದು ಸಮಾಜದ ಚರಿತೆ, ಒಂದು ದೇಶದ ಚರಿತೆ’ ಎಂದು ಹೇಳಿಕೊಂಡಿದ್ದು, ಅವರ ಚಿಂತನೆಗಳನ್ನು ಮತ್ತು ಸಮುದಾಯದ ಬಗೆಗಿರುವ ಕಳವಳವನ್ನು ಈ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಲಂಬಾಣಿ ಸಮುದಾಯದ ಜೀವನ ಶೈಲಿಯನ್ನು ವಿವರಿಸುತ್ತಾ, ಆರ್ಥಿಕ ದುಃಸ್ಥಿತಿಯಿಂದಾಗಿ ಸಮುದಾಯ ಎದುರಿಸುತ್ತಿರುವ ನೋವುಗಳನ್ನೂ, ದುಡಿಮೆಯಿಲ್ಲದೆ ಕಳ್ಳಭಟ್ಟಿ ಸಾರಾಯಿ ವ್ಯಾಪಾರವನ್ನೇ ಜೀವನಾಧಾರವಾಗಿಸಿಕೊಂಡು ಪಡುತ್ತಿರುವ ಬವಣೆಗಳನ್ನು ಈ ಕೃತಿ ಸಾಧ್ಯಂತವಾಗಿ ಬಿಚ್ಚಿಟ್ಟಿದೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 15)
©2024 Book Brahma Private Limited.