`ಮೇ ಡೇ ಹುತಾತ್ಮರ ಮಹಾನ್ ಗಾಥೆ ‘ ಕೃತಿಯು ರಾಹು ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯ ಮೂಲ ಲೇಖಕರು ವಿಲಿಯಂ ಆಂಡಲ್ ಮನ್. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಂದು ಪ್ರಪಂಚದಾದ್ಯಂತ ಪ್ರಾಯಶಃ ಎಲ್ಲ ದೇಶಗಳಲ್ಲಿಯೂ ತಪ್ಪದೆ ಆಚರಿಸಲ್ಪಡುವ ದಿನವೆಂದರೆ ಮೇ. 1. ಇದು ಕಾರ್ಮಿಕರ ದಿನ. ಇದಕ್ಕೆ ತನ್ನದೇ ಆದ ದೀರ್ಘ ಚರಿತ್ರೆಯಿದೆ. ಆದರೆ, ಈ ಚರಿತ್ರೆಯ ಮಹತ್ವ ಅರಿಯದ ಅನೇಕರು ಆ ದಿನವನ್ನು ಕೇವಲ ಔಪಚಾರಿಕವಾಗಿ ಆಚರಿಸಿ ಕೈ ಬಿಡುವ ಪ್ರವೃತ್ತಿ ಇತ್ತೀಚೆಗೆ ಬಹು ವ್ಯಾಪಕವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮೇ ದಿನದ ಮಹತ್ವವನ್ನು ವಿಸ್ತೃತವಾಗಿ ವಿವರಿಸುವ ಅನೇಕ ಗ್ರಂಥಗಳು ಇಂಗ್ಲಿಷ್ ಮತ್ತು ಇತರ ಯುರೋಪಿಯನ್ ಭಾಷೆಗಳಲ್ಲಿ ಇವೆ. ಆದರೆ ಕನ್ನಡದಲ್ಲಿ ಮಾತ್ರ ತೀರ ವಿರಳವೆಂದೇ ಹೆಳಬೇಕು. ಈ ಅಭಾವವನ್ನು ನೀಗುವ ದಾರಿಯಲ್ಲಿ ಒಂದು ಸಣ್ಣ ಪ್ರಯತ್ನ ಈ ಅನುವಾದಿತ ಕೃತಿಯಾಗಿದೆ.
©2024 Book Brahma Private Limited.