ಎಲ್ಲ ನೆನಪಾಗುತ್ತಿದೆ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಆತ್ಮಕಥನ. ಈ ಕೃತಿಯ ಬಗ್ಗೆ ಬರೆಯುತ್ತಾ...ಅನಾತ್ಮ ಕಥನದ ಮೂಲಕವೇ “ಆತ್ಮ ಕಥನ ಎನ್ನುವುದನ್ನು ಲಕನ್ ನಂಥ ಮನೋವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಲೇಖಕ ಜಿ.ಎಸ್.ಆಮೂರ. ಜಗತ್ತು ಒಂದು ಕನ್ನಡಿ ಇದ್ದ ಹಾಗೆ- ಅದೊಂದು 'ಮಾಯಾ' ಕನ್ನಡಿ ಎಂದು ನಂಬಿದವರೂ ಉಂಟು. ಆದರೆ ಈ ಕನ್ನಡಿಯಲ್ಲಿ ನೋಡಿದಾಗ ಮಾತ್ರ ನಮ್ಮ ಮುಖ ಪರಿಚಯವಾಗುತ್ತದೆ. ಮನುಷ್ಯನ ಏಕಾಂತ ಜೀವನದ-ಸ್ಕೃತಿ, ಕಲ್ಪನೆ, ಧ್ಯಾನ, ಶ್ರೀಮಂತಿಕೆಯೂ ಕೂಡ ಹೊರಜಗತನ್ನು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ಹೀಗಾಗಿ ಎಚೈಸಿಯವರ ಎರಡೂ ಅನಾತ್ಮಕಥನಗಳು ಮೆಚ್ಚುಗೆ ಗಳಿಸುತ್ತವೆ. ಆತ್ಮಕಥನದ ಮೂಲಕ ಒಬ್ಬ ಲೇಖಕ ತನ್ನ ಬದುಕು - ವ್ಯಕ್ತಿತ್ವಗಳ ಅರ್ಥ, ಸೂತ್ರ, ಅನನ್ಯತೆಗಳನ್ನು ಶೋಧಿಸ ಹೊರಟಾಗ ಅವನಿಗೆ ಈ ಶೋಧದ ಹೊರಗಿನ ಅನುಭವ ಪ್ರಸ್ತುತವಾಗದಿರುವುದರಿಂದ ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಎಚ್ಚೆಸ್ವಿ ಅವರ ಅನಾತ್ಮಕಥನಗಳು ಈ ಅಪಾಯದಿಂದ ಪಾರಾಗಿವೆ.
ಹೀಗಾಗಿ ಅವುಗಳಲ್ಲಿ ಲೇಖಕನ ವ್ಯಕ್ತಿತ್ವ ಅನಿವಾರ್ಯವಾಗಿ ಮೂಡಿಬರುವುದಲ್ಲದೆ ಶಿವರಾಮ ಕಾರಂತರ “ಹಳ್ಳಿಯ ಹತ್ತು ಸಮಸ್ತರು' , ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ “ನಮ್ಮೂರ ರಸಿಕರು - ಮೊದಲಾದ ಕಥನಗಳಲ್ಲಿ ಇದ್ದಂತೆ ಬಾಹ್ಯ ಜಗತ್ತೂ ಪ್ರತಿಫಲಿತವಾಗುತ್ತದೆ. ಬದುಕನ್ನು ಒಂದು ವಿಸ್ಮಯವಾಗಿ ನೋಡುವ -ವೈಎನೈ ಭಾಷೆಯಲ್ಲಿ- ವಂಡರ್ ದೃಷ್ಟಿಯಿದ್ದಾಗ ಮಾತ್ರ ಇದು ಸಾಧ್ಯ. ಕಾವ್ಯದಲ್ಲಿದ್ದಂತೆ ಗದ್ಯದಲ್ಲೂ- ಕಾವ್ಯ ಗದ್ಯದ ಈ ಭೇದ ಅಷ್ಟು ಅವಶ್ಯವೇ?- ಎಚ್ಚೆಸ್ವಿ ಸತತವಾಗಿ ಪ್ರಯೋಗಶೀಲರಾಗಿರುವುದು ಸಂತಸದ ವಿಷಯ ಎನ್ನುತ್ತಾರೆ ಜಿ.ಎಸ್. ಆಮೂರ.
©2024 Book Brahma Private Limited.