‘ಅನುವಾದ: ಆಧುನಿಕ ಜಗತ್ತಿನಲ್ಲಿ ’ ಎಂಬುದು ವಿಮರ್ಶಕ ಡಾ. ಪ್ರಧಾನ ಗುರುದತ್ತ ಅವರ ಕೃತಿ. ಒಂದು ಕೃತಿಯ ಅನುವಾದವೆಂದರೆ ಎರಡು ಸಂಸ್ಕೃತಿಗಳ ವಿವರ ಎಂದೇ ಅರ್ಥ. ಅನುವಾದಕರಿಗೆ ಎರಡು ಭಾಷೆಗಳು ಚೆನ್ನಾಗಿ ಗೊತ್ತಿರಬೇಕು. ತಪ್ಪಿದರೆ, ಅಭಾಸಗಳೇ ಕಾಣಿಸಿಕೊಂಡು ಅನುವಾದ ವ್ಯರ್ಥವಾಗುತ್ತದೆ. ಆಧುನಿಕತೆಯ ಸಂದರ್ಭದಲ್ಲಿ ಹೊಸ ಹೊಸ ಪರಿಕಲ್ಪನೆಗಳು, ಭಾಷಾ ಹೊಸತುಗಳು ಕಾಣಿಸಿಕೊಳ್ಳುತ್ತಿದ್ದು, ತುಂಬಾ ಎಚ್ಚರಿಕೆಯಿಂದ ಅನುವಾದ ಮಾಡುವ ಅಗತ್ಯವಿದೆ. ಇಂತಹ ಜಿಜ್ಞಾಸೆಗಳನ್ನು, ತಾರ್ಕಿಕತೆಗಳನ್ನು ಒಳಗೊಂಡ ಕೃತಿ ಇದು.
ಅನುವಾದದ ವ್ಯಾಪ್ತಿ, ಅನುವಾದದ ಅಗತ್ಯ, ಅನುವಾದದ ಪ್ರಯೋಜನ, ಅನುವಾದ- ಕಲೆಯೇ ವಿಜ್ಞಾನವೇ, ಅನುವಾದಕನ ಅರ್ಹತೆಗಳು, ಅನುವಾದ ತತ್ವಗಳು, ಅನುವಾದ ಪ್ರಕಾರಗಳು, ಅನುವಾದದ ಸಮಸ್ಯೆಗಳು ಮತ್ತು ಯಂತ್ರಾನುವಾದ: ಈಚಿನ ಬೆಳವಣಿಗೆ ಎಂಬ 9 ಲೇಖನಗಳಿವೆ. ಈ ಕೃತಿಯು ಮೊದಲ ಬಾರಿ 1985ರಲ್ಲಿ (ಪುಟ: 58, ಬೆಲೆ: 6 ರೂ) ಪ್ರಕಟಗೊಂಡಿತ್ತು.
©2024 Book Brahma Private Limited.