'ವಿಜ್ಞಾನದೊಳಗೊಂದು ಜೀವನ'ದಲ್ಲಿ ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥನ. ಇಲ್ಲಿ ಅವರು ಒಬ್ಬ ಮಹಾನ್ ವಿಜ್ಞಾನಿಯಾಗಲು ಯಾವ ರೀತಿ ಕ್ರಿಯಾಶೀಲರಾಗಬೇಕೆಂಬುದರ ಬಗ್ಗೆ ವಿವರಿಸುತ್ತಾರೆ. ಒಬ್ಬ ಶ್ರೇಷ್ಠ ವಿಜ್ಞಾನಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಅವರ ಪ್ರಯತ್ನದ ಆರಂಭದ ವರ್ಷಗಳು ಹಾಗೂ ಆಗ ಎದುರಿಸಬೇಕಾಗಿದ್ದ ಅಡೆತಡೆಗಳನ್ನು ಅವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಸ್ವಾತಂತ್ರಾನಂತರದ ಭಾರತದ ಅತ್ಯಂತ ಖ್ಯಾತ ಹಾಗೂ ಗೌರವಾನ್ವಿತ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊ. ಸಿ. ಎನ್. ಆರ್. ರಾವ್ ಅವರ ಜೀವನದ ಒಂದು ಒಳನೋಟವನ್ನು ಈ ಪುಸ್ತಕ ನೀಡುತ್ತದೆ. ಅದರಲ್ಲಿ ಅವರು ತಮಗೆ ಸ್ಪೂರ್ತಿದಾಯಕರಾದ ಇಂದಿನ ಹಾಗೂ ಹಿಂದಿನ ವಿಜ್ಞಾನಿಗಳು ಮತ್ತು ವಿಜ್ಞಾನಕ್ಷೇತ್ರದಲ್ಲಿ ಯಶಸ್ವಿಯಾಗಲು ಅವಶ್ಯವಾದ ಸಂವಹನ ಕೌಶಲ್ಯ ಇವುಗಳ ಬಗ್ಗೆಯೂ ಹೇಳುತ್ತಾರೆ. ವಿಜ್ಞಾನವನ್ನೇ ಜೀವನದ ವೃತ್ತಿಯಾಗಿ ಮಾಡಿಕೊಳ್ಳಬಯಸುವ ಯುವಜನಾಂಗಕ್ಕೆ ಆ ಮಾರ್ಗದಲ್ಲಿ ಬರಬಹುದಾದ ಎಡರು-ತೊಡರುಗಳನ್ನು ಯಾವ ರೀತಿ ನಿಭಾಯಿಸಿಕೊಂಡು ಮುಂದುವರಿಯಬೇಕೆಂಬುದರ ಬಗ್ಗೆ ಅಮೂಲ್ಯ ಸಲಹೆಗಳನ್ನೂ ಅವರು ಈ ಪುಸ್ತಕದಲ್ಲಿ ನೀಡಿದ್ದಾರೆ.
©2024 Book Brahma Private Limited.